ಸೀತಾಪುರ(ಉತ್ತರ ಪ್ರದೇಶ): ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದ ಸೀತಾಪುರದಲ್ಲಿ ಮಹಿಳೆಯೊಬ್ಬರ ಶವವನ್ನು ತುಂಡರಿಸಿ ದೂರದ ಸ್ಥಳದಲ್ಲಿ ವಿಲೇವಾರಿ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪಂಕಜ್ ಮೌರ್ಯ ಹಾಗೂ ಜ್ಯೋತಿ ಅಲಿಯಾಸ್ ಸ್ನೇಹ ಇಬ್ಬರೂ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ, ಸ್ನೇಹ ನಿತ್ಯ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದನ್ನು ಕಂಡ ಮೌರ್ಯ ಬೇಸತ್ತು ಹೋಗಿದ್ದ. ಅಷ್ಟೇ ಅಲ್ಲದೇ, ಸ್ನೇಹ ಪತಿಯನ್ನು ಬಿಟ್ಟು ಬೇರೆ ಮನೆಯೊಂದರಲ್ಲಿ ವಾಸವಿದ್ದಳು. ಪತ್ನಿ ನನಗೆ ಮೋಸ ಮಾಡುತ್ತಿದ್ದಾಳೆ ಎಂದು ಭಾವಿಸಿದ ಮೌರ್ಯ ಸ್ನೇಹಾಳ ಹತ್ಯೆಗೆ ಸಂಚು ರೂಪಿಸಿದ್ದ.
ಅದರಂತೇ, ಮೌರ್ಯ ತನ್ನ ಸ್ನೇಹಿತನಾದ ದುರ್ಜನ್ ಪಾಸಿ ಜೊತೆ ಸೇರಿ ಸ್ನೇಹಾಳನ್ನು ಕೊಲೆ ಮಾಡಿ, ಆರೋಪ ಮರೆಮಾಚಲೆಂದು ದೇಹವನ್ನು ತುಂಡರಿಸಿ ವಿವಿಧ ಪ್ರದೇಶಗಳಿಗೆ ಎಸೆದಿದ್ದಾರೆ.
ನವೆಂಬರ್ 8 ರಂದು ಸೀತಾಪುರ ಜಿಲ್ಲೆಯ ರಾಮ್ಪುರ ಕಲಾನ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾರಿಹಾದಿಂದ ಪೊಲೀಸರು ಸ್ನೇಹಾಳ ಶವವನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ತಾನೇ ಕೊಲೆ ಮಾಡಿರುವುದಾಗಿ ಮೌರ್ಯ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದೀಗ ಆರೋಪಿಗಳಾದ ಮೌರ್ಯ ಮತ್ತು ದುರ್ಜನ್ ಪಾಸಿ ಪೊಲೀಸರ ಅತಿಥಿಯಾಗಿದ್ದಾರೆ.
BIGG NEWS : ರಾಜ್ಯದಲ್ಲಿ ‘ಲವ್ ಜಿಹಾದ್ ನಿಷೇಧ’ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ |Love Jihad
BIG NEWS: ಜು. 2021 ರಿಂದ ಪ್ರತಿ 3 ದಿನಗಳಿಗೊಮ್ಮೆ ಒಬ್ಬ ರೈಲ್ವೆ ಅಧಿಕಾರಿಯ ವಜಾ: ವರದಿ
BIGG NEWS : ರಾಜ್ಯದಲ್ಲಿ ‘ಲವ್ ಜಿಹಾದ್ ನಿಷೇಧ’ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ |Love Jihad