ದಕ್ಷಿಣ ಕನ್ನಡ: ಈಗಾಗಲೇ ಹಲಾಲ್ ಕಟ್ ಬ್ಯಾನ್, ಜಾತ್ರೆಗಳಲ್ಲಿ ಅನ್ಯಧರ್ಮೀಯರಿಗೆ ಅವಕಾಶವಿಲ್ಲ ಎಂಬುದಾಗಿ ಧರ್ಮ ದಂಗಲ್ ಆರಂಭಗೊಂಡು ತಣ್ಣಗಾಗಿತ್ತು. ಈಗ ಮತ್ತೆ ಧರ್ಮ ಧಂಗಲ್ ಕರಾವಳಿಯಲ್ಲಿ ಚಿಗುರೊಡೆಗಿದೆ. ಕುಕ್ಕೆಯಲ್ಲಿ ನಡೆಯಲಿರುವಂತ ಚಂಪಾಷಷ್ಠಿಯಲ್ಲಿ ಅನ್ಯಮತೀಯರು ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಬ್ಯಾನರ್ ರಾರಾಜಿಸುತ್ತಿದೆ.
ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕಡಬಾ ತಾಲೂನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಚಂಪಾಷಷ್ಠಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಡೆಯುವಂತ ವ್ಯಾಪಾರದಲ್ಲಿ ಅನ್ಯಮತೀಯರನ್ನು ನಿಷೇಧಿಸಲಾಗಿದೆ ಎಂಬುದಾಗಿ ಬ್ಯಾನರ್ ಹಾಕಲಾಗಿದೆ.
ಹಿಂದೂ ಜಾಗರಣಾ ವೇದಿಕೆಯಿಂದ ಬ್ಯಾನರ್ ಅನ್ನು ಕುಮಾರಧಾರ ಸ್ನಾನಘಟ್ಟದ ಸಮೀಪದಲ್ಲಿ ಹಾಕಲಾಗಿದೆ. ಈ ಬ್ಯಾನರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ. ಹಿಂದೂಗಳಿಂದ, ಹಿಂದೂಗಳಿಗಾಗಿ, ಹಿಂದೂಗಳಿಗೋಸ್ಕರ ಎಂಬುದಾಗಿ ಹೇಳಲಾಗಿದೆ.
ಬಿಬಿಎಂಪಿ ವೋಟರ್ ಐಡಿ ಪರಿಷ್ಕರಣೆ ಅಕ್ರಮ: ನಾಳೆ ಬೆಂಗಳೂರಿಗೆ ಉಪ ಚುನಾವಣಾ ಆಯುಕ್ತರ ಭೇಟಿ
ಅನ್ಯಮತೀಯರ ವ್ಯಾಪರಕ್ಕೆ ನಿಷೇಧ ಹೇರಿರುವಂತ ಬ್ಯಾನರ್ ಗೆ ಹಲವರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದ್ರೇ ಇದು ಕುಕ್ಕೆ ದೇವಸ್ಥಾನದ ವತಿಯಿಂದ ಅಳವಡಿಸಿರೋದಲ್ಲ. ಇದಕ್ಕೂ ದೇಗುಲಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ದೇಗುಲ ಸಮಿತಿಯು ಸ್ಪಷ್ಟ ಪಡಿಸಿದೆ.