ಹಾಸನ: ಈಗಾಗಲೇ ಕಾಡಾನೆ ದಾಳಿಯನ್ನು ತಡೆಯೋದಕ್ಕಾಗಿ ರಾಜ್ಯ ಸರ್ಕಾರದಿಂದ ( Karnataka Government ) ಎಲಿಫೆಂಟ್ ಟಾಸ್ಕ್ ಪೋರ್ಸ್ ರಚನೆ ಮಾಡಿ ಆದೇಶಿಸಲಾಗಿತ್ತು. ಈ ಬೆನ್ನಲ್ಲೇ ದಾಳಿಯಲ್ಲಿ ಮೃತರಾದಂತವರ ಕುಟುಂಬಸ್ಥರಿಗೆ 15 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ. ಅಲ್ಲದೇ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗವನ್ನು ( Government Job ) ನೀಡಲಾಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಘೋಷಣೆ ಮಾಡಿದ್ದಾರೆ.
ಬಿಬಿಎಂಪಿ ವೋಟರ್ ಐಡಿ ಪರಿಷ್ಕರಣೆ ಅಕ್ರಮ: ನಾಳೆ ಬೆಂಗಳೂರಿಗೆ ಉಪ ಚುನಾವಣಾ ಆಯುಕ್ತರ ಭೇಟಿ
ಇಂದು ಹಾಸನ ಜಿಲ್ಲೆಯ ಹಳೇಬೇಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಡಾನೆ ಸ್ಥಳಾಂತರ ಮಾಡುವುದಕ್ಕೆ ವಿಶೇಷ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಕಾಡಾನೆ ಹಾವಳಿ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಮಾನವ ವನ್ಯ ಜೀವಿ ಸಂಘರ್ಷ ಹೆಚ್ಚಾಗಿದೆ. ಬರಗಾಲದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಗಳು ಹಿಂದಿರುಗುವುದಿಲ್ಲ. ಗುಂಪಿನಲ್ಲಿರುವ ಆನೆಗಳನ್ನು ಚದುರಿಸುವುದೇ ಕಷ್ಟ ಎಂದರು.
ಆನೆಗಳು ಹೆಚ್ಚಾಗಿರುವ ಕಡೆ ನೂರಾರು ಸಿಬ್ಬಂದಿ ಸೇರಿ ಹಿಮ್ಮೆಟ್ಟಿಸಬೇಕು. ಅದಕ್ಕೆ ಬೇಕಾದಷ್ಟು ಹಣ ನೀಡಲು ಸರ್ಕಾರ ಸಿದ್ಧವಿದೆ. ಪ್ರಸಕ್ತ ವರ್ಷದ ಬಜೆಟ್ ನಲ್ಲಿ ನೂರು ಕೋಟಿ ಹಣ ಮೀಸಲಿಟ್ಟಿದ್ದೇವೆ. ಬಂಢೀಪುರದಲ್ಲಿ ಹೊಸ ರೀತಿಯ ಫೆನ್ಸಿಂಗ್ ಟ್ರಯರ್ ಮಾಡುತ್ತೇವೆ ಎಂದು ಹೇಳಿದರು.
ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike
ಕಾಡಾನೆ ದಾಳಿಯಲ್ಲಿ ಮೃತರಾದವರಿಗೆ 15 ಲಕ್ಷ ಪರಿಹಾರವನ್ನು ಸರ್ಕಾರ ನೀಡಲಿದೆ. ಕಾಡಾನೆ ದಾಳಿಗೆ ಬಲಿಯಾಗುವ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆಯೂ ಗಂಭೀರವಾಗಿ ಚರ್ಚೆ ಮಾಡುತ್ತೇವೆ ಎಂದರು.