ಬೆಂಗಳೂರು: ಚರ್ಮ ಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವಂತ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, ಇಂದು ಹಾಲು, ಮೊಸರಿನ ದರವನ್ನು ( Nandini Milk, Curd Price Hike ) ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಹೊಸ ಪರಿಷ್ಕೃತ ದರಗಳು ನಾಳೆಯಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.
ಬಿಬಿಎಂಪಿ ವೋಟರ್ ಐಡಿ ಪರಿಷ್ಕರಣೆ ಅಕ್ರಮ: ನಾಳೆ ಬೆಂಗಳೂರಿಗೆ ಉಪ ಚುನಾವಣಾ ಆಯುಕ್ತರ ಭೇಟಿ
ಈ ಕುರಿತಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (Karnataka Co-operative Milk Producers Federation- KMF ) ಮಾಹಿತಿ ಬಿಡುಗಡೆ ಮಾಡಿದ್ದು, ನಂದಿನಿಯ ಎಲ್ಲಾ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.
ಶಿವಮೊಗ್ಗ: ನ.24ರ ನಾಳೆ ‘ಸೊರಬ’ ತಾಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಹೀಗಿದೆ ನಂದಿನ ಹಾಲು, ಮೊಸರಿನ ಪರಿಷ್ಕೃತ ನೂತನ ದರಪಟ್ಟಿ
- ಪ್ರಸ್ತುತ ಟೋಲ್ ಹಾಲಿನ ದರ ರೂ.37 ಇತ್ತು. ಇದೀಗ 2 ರೂ ಹೆಚ್ಚಳದ ನಂತ್ರ ರೂ.39ಕ್ಕೆ ತಲುಪಿದೆ.
- ಹೋಮೋಜಿನೈಸ್ಡ್ ಟೋನ್ಡ್ ಹಾಲು ರೂ.38ರಿಂದ ರೂ.40ಕ್ಕೆ ಹೆಚ್ಚಳ
- ಹೋಮೋಜಿನೈಸ್ಡ್ ಹಸುವಿನ ಹಾಲು ರೂ.42 ರಿಂದ 44ಕ್ಕೆ ಹೆಚ್ಚಳ
- ಸ್ಪೆಷಲ್ ಹಾಲು ರೂ.43 ರಿಂದ 45ಕ್ಕೆ ಹೆಚ್ಚಳ
- ಶುಭಂ ಹಾಲು ರೂ.43 ರಿಂದ 45ಕ್ಕೆ ಏರಿಕೆ
- ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು ರೂ.44 ರಿಂದ 46ಕ್ಕೆ ಹೆಚ್ಚಳ
- ಸಮೃದ್ಧಿ ಹಾಲು ರೂ.48 ರಿಂದ 50ಕ್ಕೆ ಹೆಚ್ಚಳ
- ಸಂತೃಪ್ತಿ ಹಾಲು (ಹೋಮೋಜಿನೈಸ್ಡ್) ರೂ.50 ರಿಂದ 52ಕ್ಕೆ ಹೆಚ್ಚಳ
- ಡಬಲ್ ಟೋನ್ಡ್ ಹಾಲು ರೂ.36 ರಿಂದ 38ಕ್ಕೆ ಏರಿಕೆ
- ಇನ್ನೂ ಮೊಸರು ಪ್ರತಿ ಕೆಜಿಗೆ ರೂ.45 ರಿಂದ 47 ಹೆಚ್ಚಳ ಮಾಡಲಾಗಿದೆ.
ಈ ಮೇಲ್ಕಂಡ ನಂದಿನ ಹಾಲು, ಮೊಸರಿನ ಪರಿಷ್ಕೃತ ದರ ಪಟ್ಟಿಗಳು ನಾಳೆಯಿಂದ ಜಾರಿಗೆ ಬರಲಿದೆ ಎಂಬುದಾಗಿ ಕೆಎಂಎಫ್ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ