ಬೆಂಗಳೂರು: ರಾಷ್ಟ್ರ ಧ್ವಜಕ್ಕಿಂತ ಯಾರೂ ಮೇಲಲ್ಲ, ಆದರೆ ಬಿಜೆಪಿ ಮಾತ್ರ ರಾಷ್ಟ್ರಧ್ವಜಕ್ಕಿಂತ ಭಗವಧ್ವಜ, ಬಿಜೆಪಿ ಧ್ವಜವೇ ಮೇಲು ಎಂದು ವರ್ತಿಸುತ್ತದೆ. ಸಚಿವ ಬಿ ಶ್ರೀರಾಮುಲು ಅವರು ರಾಷ್ಟ್ರ ಧ್ವಜಕ್ಕಿಂತ ನಾನೇ ಮೇಲು ಎನ್ನುತ್ತಿದ್ದಾರೆ! ರಾಷ್ಟ್ರಧ್ವದ ಬಗ್ಗೆ ಕನಿಷ್ಠ ಗೌರವ ಹೊಂದಿರದ ಬಿಜೆಪಿಗರ ನಕಲಿ ದೇಶಭಕ್ತಿ ಹೀಗೆ ಅನಾವರಣ ಆಗುತ್ತಲೇ ಇರುತ್ತದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ.
ರಾಷ್ಟ್ರ ಧ್ವಜಕ್ಕಿಂತ ಯಾರೂ ಮೇಲಲ್ಲ, ಆದರೆ ಬಿಜೆಪಿ ಮಾತ್ರ ರಾಷ್ಟ್ರಧ್ವಜಕ್ಕಿಂತ ಭಗವಧ್ವಜ, ಬಿಜೆಪಿ ಧ್ವಜವೇ ಮೇಲು ಎಂದು ವರ್ತಿಸುತ್ತದೆ.
ಸಚಿವ @sriramulubjp ಅವರು ರಾಷ್ಟ್ರ ಧ್ವಜಕ್ಕಿಂತ ನಾನೇ ಮೇಲು ಎನ್ನುತ್ತಿದ್ದಾರೆ!
ರಾಷ್ಟ್ರಧ್ವದ ಬಗ್ಗೆ ಕನಿಷ್ಠ ಗೌರವ ಹೊಂದಿರದ ಬಿಜೆಪಿಗರ ನಕಲಿ ದೇಶಭಕ್ತಿ ಹೀಗೆ ಅನಾವರಣ ಆಗುತ್ತಲೇ ಇರುತ್ತದೆ. pic.twitter.com/1ZvLeMP518
— Karnataka Congress (@INCKarnataka) November 23, 2022
ಈ ಕುರಿತು ಟ್ವಿಟ್ ಮಾಡಿದ್ದು, ಬೇಲ್ ಮೇಲೆ ಹೊರಗಿರುವ ಬಿಎಲ್ ಸಂತೋಷ್ ಎಂಬ ವ್ಯಕ್ತಿ ಅಪರೇಷನ್ ಕಮಲದ ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ ಏಕೆ ಬಿಜೆಪಿ ? ಕಾನೂನನ್ನು ಗೌರವಿಸುವುದು “ಶಾಸಕರ ಕಳ್ಳರಿಗೆ” ತಿಳಿದೇ ಇಲ್ಲವೇ? ತೆಲಂಗಾಣದಲ್ಲಿ ವಶಪಡಿಸಿಕೊಂಡ 150 ಕೋಟಿ ಹಣದ ಮೂಲ ಯಾವುದು? ಇಷ್ಟು ದೊಡ್ಡ ಮೊತ್ತ ಸಿಕ್ಕಿದರೂ ಐಟಿ, ಇಡಿಗಳು ಕಾರ್ಯೋನ್ಮುಖರಗದಿರುವುದೇಕೆ? ಎಂದು ಪ್ರಶ್ನಿಸಿದೆ.
ಬೇಲ್ ಮೇಲೆ ಹೊರಗಿರುವ @blsanthosh ಎಂಬ ವ್ಯಕ್ತಿ ಅಪರೇಷನ್ ಕಮಲದ ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ ಏಕೆ @BJP4Karnataka ?
ಕಾನೂನನ್ನು ಗೌರವಿಸುವುದು "ಶಾಸಕರ ಕಳ್ಳರಿಗೆ" ತಿಳಿದೇ ಇಲ್ಲವೇ?
ತೆಲಂಗಾಣದಲ್ಲಿ ವಶಪಡಿಸಿಕೊಂಡ 150 ಕೋಟಿ ಹಣದ ಮೂಲ ಯಾವುದು? ಇಷ್ಟು ದೊಡ್ಡ ಮೊತ್ತ ಸಿಕ್ಕಿದರೂ ಐಟಿ, ಇಡಿಗಳು ಕಾರ್ಯೋನ್ಮುಖರಗದಿರುವುದೇಕೆ? pic.twitter.com/W6D8VV2Im9
— Karnataka Congress (@INCKarnataka) November 23, 2022
ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದ 1.62 ಲಕ್ಷ ಮಕ್ಕಳು ಈಗ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಮಕ್ಕಳ ಶಿಕ್ಷಣವನ್ನು ಬುಗುರಿ ಆಟವೆಂದು ತಿಳಿದಿರುವ ಅಪ್ರಬುದ್ದ ಸಚಿವ ಬಿ.ಸಿ ನಾಗೇಶ್ ಅವರೇ, ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರದಿದ್ದರೆ ನಿಮ್ಮ ಬಣ್ಣದ ಶಾಲೆ ನೋಡುವವರು ಯಾರು?! ಇದು ನಿಮ್ಮ ವೈಫಲ್ಯವಲ್ಲವೇ? ಎಂದು ಕೇಳಿದೆ.
ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದ 1.62 ಲಕ್ಷ ಮಕ್ಕಳು ಈಗ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಮಕ್ಕಳ ಶಿಕ್ಷಣವನ್ನು ಬುಗುರಿ ಆಟವೆಂದು ತಿಳಿದಿರುವ ಅಪ್ರಬುದ್ದ ಸಚಿವ @BCNagesh_bjp ಅವರೇ, ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರದಿದ್ದರೆ ನಿಮ್ಮ ಬಣ್ಣದ ಶಾಲೆ ನೋಡುವವರು ಯಾರು?!
ಇದು ನಿಮ್ಮ ವೈಫಲ್ಯವಲ್ಲವೇ? pic.twitter.com/RdyLxBRcC4
— Karnataka Congress (@INCKarnataka) November 23, 2022