ಉಡುಪಿ: ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಸಿಎಫ್ಐ, ಪಿಎಫ್ಐ ಸಂಘಟನೆಗಳು ಉಗ್ರರಿಗೆ ಸಹಕಾರ ಕೊಡುತ್ತಿವೆ. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದಾರೆ.
ಪದೇ ಪದೇ ಆಹಾರ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ..! ತಜ್ಞರ ಮಾಹಿತಿ
ನಗರದಲ್ಲಿ ಮಾತನಾಡಿದ ಅವರು, ಬಾಬರ್ನ ಕಾಲದಿಂದಲೂ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ. ಸಾವಿರಾರು ವರ್ಷದಿಂದ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಒದ್ದಾಡುತ್ತಿದ್ದಾರೆ. ಭಾರತ ಒಂದು ಜಾತ್ಯತೀತ ರಾಷ್ಟ್ರ, ಅದು ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯುತ್ತದೆ. ಯಾವುದೇ ಕಾರಣಕ್ಕೂ ಭಾರತವನ್ನ ಮುಸ್ಲಿಂ ರಾಷ್ಟ್ರ ಮಾಡಲು ಬಿಡಲ್ಲ ಎಂದು ಶಾಸಕ ರಘುಪತಿ ಭಟ್ ಖಡಕ್ ಆಗಿ ಹೇಳಿದರು.
ಯುಪಿ, ಕೋಲ್ಕತ್ತಾದಿಂದ ಪ್ರವಚನ ಮಾಡಲು ಕೆಲವರು ಬರುತ್ತಿದ್ದಾರೆ. ಹೀಗೆ ಪ್ರವಚನಕ್ಕೆಂದು ಬಂದವರು ಬೇರೆ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂಗಳೂರಿನಲ್ಲಿ ಎನ್ಐಎಯ ಒಂದು ಘಟಕ ಸ್ಥಾಪನೆ ಆಗಬೇಕು ಎಂದರು.