ಗಂಗಾವತಿ: ತೆಲಂಗಾಣದ ಘೋಶಾಮಾಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಲೋದ ಅವರು ತಮ್ಮ ನಿಗದಿತ ಪ್ರವಾಸದ ವೇಳಾಪಟ್ಟಿ ಬದಲಾಯಿಸಿ, ಅಂಜನಾದ್ರಿ ಬೆಟ್ಟಕ್ಕೆ ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದಾರೆ.
BIGG NEWS : ಅಶ್ಲೀಲ ಪದ ಹೇಳಿಕೆಗೆ ಮಾಜಿ ಸಿಎಂ H.D ಕುಮಾರಸ್ವಾಮಿ ವಿಷಾದ
ಇದಕ್ಕೂ ಮೊದಲು, ಮಂಗಳವಾರ ಸಂಜೆಯೇ ದೇಗುಲಕ್ಕೆ ಆಗಮಿಸುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಈ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಂಡಿರುವ ಶಾಸಕರು ಮಂಗಳವಾರ ಸಂಜೆ ಹೊಸಪೇಟೆಗೆ ತೆರಳಿ ತಂಗಿದ್ದು, ಬುಧವಾರ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದಾರೆ. ತಮ್ಮ ಖಾಸಗಿ ಭದ್ರತಾ ಪಡೆ ಮತ್ತು ಅಂಗರಕ್ಷಕರ ಜೊತೆ ಬೆಟ್ಟ ಏರಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಪಂಪಾಸರೋವರಕ್ಕೂ ಭೇಟಿ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಶಾಸಕ ರಾಜಾಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.
BIGG NEWS : ಅಶ್ಲೀಲ ಪದ ಹೇಳಿಕೆಗೆ ಮಾಜಿ ಸಿಎಂ H.D ಕುಮಾರಸ್ವಾಮಿ ವಿಷಾದ
ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಚಿರಪರಿಚಿತರಾಗಿರುವ ರಾಜಾ ಸಿಂಗ್ ಮೇಲೆ ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ವೈ ಶ್ರೇಣಿಯ ಜೊತೆಗೆ ಹೆಚ್ಚುವರಿ ಭದ್ರತೆ ಕಲ್ಪಿಸುವಂತೆ ತೆಲಂಗಾಣದ ಎಡಿಜಿಪಿ ಕೊಪ್ಪಳ ಪೊಲೀಸರಿಗೆ ಮನವಿ ಮಾಡಿದ್ದರು.
BIGG NEWS : ಅಶ್ಲೀಲ ಪದ ಹೇಳಿಕೆಗೆ ಮಾಜಿ ಸಿಎಂ H.D ಕುಮಾರಸ್ವಾಮಿ ವಿಷಾದ