ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಯಲ್ಲಿ ಕೆಲಸ ಖಾಲಿ ಇದೆ ಎಂಬ ನೇಮಕಾತಿ ಜಾಹೀರಾತು ಒಂದು ಹರಿದಾಡುತ್ತಿದೆ. ಇದು ನಕಲಿಯಾಗಿದ್ದು, ಈ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
BREAKING NEWS : ಬೆಂಗಳೂರಿನಲ್ಲಿ ‘BMTC’ ಬಸ್ ಹರಿದು ಬಾಲಕಿ ಬಲಿ : ಚಾಲಕ ಅರೆಸ್ಟ್
ಕೆಎಸ್ಆರ್ಟಿಸಿಯಲ್ಲಿ ಡ್ರೈವರ್ ಹುದ್ದೆಗಳು ಖಾಲಿ ಇವೆ ಎಂಬ ಜಾಹೀರಾತು ಇದಾಗಿದೆ. ಮಂಗಳೂರು 250, ಪುತ್ತೂರು 200, ಚಾಮರಾಜನಗರ 100, ರಾಮನಗರದ ವಿಭಾಗದಲ್ಲಿ 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಾಹೀರಾತು ನೀಡಲಾಗಿದೆ.
BREAKING NEWS : ಬೆಂಗಳೂರಿನಲ್ಲಿ ‘BMTC’ ಬಸ್ ಹರಿದು ಬಾಲಕಿ ಬಲಿ : ಚಾಲಕ ಅರೆಸ್ಟ್
ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಕೆಎಸ್ಆರ್ಟಿಸಿ ಹೆಸರು ಬಳಕೆ ಮಾಡಿಕೊಂಡು ಈ ಜಾಹೀರಾತು ನೀಡಿದೆ. ಇದು ನಕಲಿ ಜಾಹೀರಾತು ಆಗಿದ್ದು, ಈ ಕುರಿತು ಶಿವಮೊಗ್ಗ ಕೆಎಸ್ಆರ್ಟಿಸಿ ವಿಭಾಗದ ಮುಖ್ಯಸ್ಥ ಮರಿಗೌಡ ದೂರು ಕೊಟ್ಟಿದ್ದಾರೆ.
ಈ ಕುರಿತು ಮರೀಗೌಡ ಮಾತನಾಡಿದ್ದು, “ಡ್ರೈವರ್ಗಳು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದ್ದು, 650 ಹುದ್ದೆಗಳು ಖಾಲಿ ಇವೆ ಎಂದು ಪತ್ರಿಕಾ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದರೆ ಈ ರೀತಿಯ ಯಾವುದೇ ಜಾಹೀರಾತನ್ನು ನಿಗಮದಿಂದ ಹೊರಡಿಸಿಲ್ಲ” ಎಂದು ಮರೀಗೌಡ ಸ್ಪಷ್ಟಪಡಿಸಿದ್ದಾರೆ.
https://kannadanewsnow.com/kannada/15-year-girld-dead-in-bangalore/
ಜಾಹೀರಾತಿನಲ್ಲಿ ಡ್ರೈವರ್ ಹುದ್ದೆಗೆ 7ನೇ ತರಗತಿ ವಿದ್ಯಾಭ್ಯಾಸ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ನಿಗಮದ ನೇಮಕಾತಿ ನಿಯಮದ ಪ್ರಕಾರ 10ನೇ ತರಗತಿ ಓದಿರಬೇಕು. ಬೆಂಗಳೂರಿನ ಕೇಂದ್ರ ಕಚೇರಿಯಿಂದ ಯಾವುದೇ ಈ ರೀತಿಯ ಪ್ರಕಟಣೆ ನೀಡಿಲ್ಲ ಎಂದು ತಿಳಿಸಲಾಗಿದೆ.
BREAKING NEWS : ಬೆಂಗಳೂರಿನಲ್ಲಿ ‘BMTC’ ಬಸ್ ಹರಿದು ಬಾಲಕಿ ಬಲಿ : ಚಾಲಕ ಅರೆಸ್ಟ್
ಜಾಹೀರಾತಿನಲ್ಲಿ ಏನಿದೆ?
ಕೆಎಸ್ಆರ್ಟಿಸಿ (ಹೆಚ್ಪಿವಿ) ಖಾಯಂ ನೌಕರಿ. ಮಂಗಳೂರು, ಪುತ್ತೂರು, ಚಾಮರಾಜನಗರ, ರಾಮನಗರ ವಿಭಾಗದಲ್ಲಿ ಕೆಲಸ ಖಾಲಿ ಇದೆ. ಅರ್ಜಿ ಸಲ್ಲಿಸುವವರು 7ನೇ ತರಗತಿ ಪಾಸಾಗಿರಬೇಕು. 2 ವರ್ಷದ ಅನುಭವ ಹೊಂದಿರಬೇಕು ಎಂದು ಜಾಹೀರಾತಿನಲ್ಲಿ ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳ ವೇತನ 28,990 ಆಗಿದ್ದು, 22,840 ಕೈಗೆ ಸಿಗಲಿದೆ. ವಾರದ ರಜೆ, ಯೂನಿಫಾರ್ಮ್, ಇಪಿಎಫ್ ಸೌಲಭ್ಯ ಲಭ್ಯವಿರುತ್ತದೆ ಎಂದು ತಿಳಿಸಲಾಗಿತ್ತು. ಬಯೋಡೇಟಾದೊಂದಿಗೆ ಅರ್ಜಿ ಶುಲ್ಕ 1000 ಡಿಡಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು