ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಹರಿದು ಬಾಲಕಿ ಮೃತಪಟ್ಟಿರುವ ಘಟನೆ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ನಡೆದಿದೆ.
ಇದೀಗ ಘಟನೆ ಸಂಬಂಧ ಬಿಎಂಟಿಸಿ ಬಸ್ ಚಾಲಕ ಮಹೇಂದ್ರನನ್ನು ಕೆ ಆರ್ ಪುರಂ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ಬಿಎಂಟಿಸಿ ಬಸ್ ಹರಿದು 15 ವರ್ಷದ ಬಾಲಕಿ ಲಾವ್ಯಾಶ್ರೀ ಸಾವನ್ನಪ್ಪಿದ್ದು, ತಾಯಿ, ಮಗ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಯಿ ಪ್ರಿಯದರ್ಶಿನಿ ಜೊತೆಗೆ ತೆರಳುತ್ತಿದ್ದ ವೇಳೆ ಭಟ್ಟರಹಳ್ಳಿ ಸಿಗ್ನಲ್ ಬಳಿ ದ್ವಿಚಕ್ರವಾಹನ ಸ್ಕಿಡ್ ಆಗಿ ಬಿದ್ದಿತ್ತು. ಎಡಗಡೆ ಬಿದ್ದ ಪ್ರಿಯದರ್ಶಿನಿ, ಮಗ ಯಾಸ್ವಿನ್ ಗಾಯಗೊಂಡಿದ್ದು, ಬಲಗಡೆ ಬಿದ್ದ ಲಾವಾಶ್ರೀ ಮೇಲೆ ಬಿಎಂಟಿಸಿ ಬಸ್ ಹರಿದು ಮೃತಪಟ್ಟಿದ್ದಾರೆ. ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಮಹಾರಾಷ್ಟ್ರದ ಕನ್ನಡ ಶಾಲೆಗೆ ವಿಶೇಷ ಅನುದಾನ, ಕನ್ನಡಿಗರಿಗೆ ಪಿಂಚಣಿ : ಸಿಎಂ ಬೊಮ್ಮಾಯಿ ಘೋಷಣೆ