ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ನಗರದ ಹೆಚ್ಚಿನ ಜನರು ಮೆಟ್ರೋ ಕಡೆ ಒಲವು ತೋರುತ್ತಿದ್ದಾರೆ. ಇಂತಹ ಸಮಯದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ.
BIGG NEWS: ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್: ಶಾರಿಕ್ ವಿಚಾರಣೆಗೆ ಎನ್ಐಎ ಸಿದ್ಧತೆ
ಮನೆ ಬಳಿಯಿಂದಲೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ಬಸ್ ಸೇವೆ ಕಲ್ಪಿಸಲು ಮುಂದಾಗಿದೆ. ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋ ನಿಗಮ ಒಪ್ಪಂದ ಮೇರೆಗೆ ಬಿಎಂಟಿಸಿ ಮಿನಿಬಸ್ ಆರಂಭಿಸ್ತಾ ಇದ್ದು ಶೀಘ್ರದಲ್ಲೆ ಟೆಂಡರ್ ಕರೆಯಲಿದೆ.ಬೆಂಗಳೂರಿನಂತಹ ಮಹಾನಗರದಲ್ಲಿ ಬಿಎಂಟಿಸಿ ಸೇವೆ ಹೇರಳವಾಗಿದೆ. ಮುಖ್ಯರಸ್ತೆಗಳಿಂದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ.
BIGG NEWS: ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್: ಶಾರಿಕ್ ವಿಚಾರಣೆಗೆ ಎನ್ಐಎ ಸಿದ್ಧತೆ
ಬೆಂಗಳೂರಿನ ಗಲ್ಲಿಗಳಿಂದ, ಅಪಾರ್ಟ್ ಮೆಂಟ್ಗಳಿಂದ ನೇರವಾಗಿ ಬಸ್ ಸೇವೆ ಇಲ್ಲ. ಹೀಗಾಗಿ ಮೆಟ್ರೋ ಪ್ರಯಾಣ ಮತ್ತಷ್ಟು ಸುಲಭ ಮಾಡಲು ಬಿಎಂಆರ್ ಸಿಎಲ್ ಮುಂದಾಗಿದೆ. ನೇರವಾಗಿ ಮನೆಗಳಿಂದ ಮತ್ತು ಅಪಾರ್ಟ್ ಮೆಂಟ್ ಗಳಿಂದ ಸಂಪರ್ಕ ಕಲ್ಪಿಸುವ ಮಿನಿ ಬಸ್ಸೇವೆ ಒದಗಿಸಲು ಮುಂದಾಗಿದೆ. ಇದಕ್ಕಾಗಿ ಮಿನಿ ಬಸ್ಗಳನ್ನ ನೀಡುವಂತೆ ಬಿಎಂಟಿಸಿ ಮುಂದೆ ಬಿಎಂಆರ್ ಸಿಎಲ್ ಪ್ರಸ್ತಾಪ ಇಟ್ಟಿದ್ದು ಇದನ್ನ ಕಾರ್ಯ ರೂಪಕ್ಕೆ ತರಲು ಬಿಎಂಟಿಸಿ ಮುಂದಾಗಿದೆ.