ಮಂಡ್ಯ: ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ಕಾಂಗ್ರೆಸ್ ನಿಂದ ತನಿಖೆಗಾಗಿ ದೂರು ನೀಡಲಾಗಿದೆ. ಅಕ್ರಮವೇ ನಡೆದಿಲ್ಲ ಎಂದಾದರೇ ತನಿಖೆ ಯಾಕೆ ನಡೆಸಬೇಕು ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ದೂರು ನೀಡಲಾಗಿದೆ. ನಾವು ದೂರು ಕೊಟ್ಟಿರುವುದೇ ಸಿಎಂ ಮೇಲೆ. ಅವರು ಯಾರ ಮೇಲೆ ತನಿಖೆ ಮಾಡಿಸುತ್ತಾರೆ..? ಅಕ್ರಮ ನಡದೇ ಇಲ್ಲ ಎಂದ ಮೇಲೆ ತನಿಖೆ ಯಾಕೆ ಮಾಡಿಸ್ತಾರೆ.? ಅಕ್ರಮ ನಡದೆ ಇಲ್ಲ ಅನ್ನೋದಾದ್ರೆ ಏನ್ ಅತ್ಯ ಹೊರಗೆ ಬರತ್ತದೆ ಎಂದರು.
ಕಾಂಗ್ರೆಸ್ ಹಗಲು ದರೋಡೆ ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ನಮಗೆ ಈಗ ಅಧಿಕಾರ ಇಲ್ಲ ವಿರೋಧ ಪಕ್ಷದಲ್ಲಿ ಇದ್ದೇವೆ. ಅವರು ಅಧಿಕಾರದಲ್ಲಿ ಇದ್ದಾರೆ. ಅವರ ಮೇಲೆ ಹೇಳಿದಾಗ ಅವರಿಗೊಂದು ರೋಗ ಬಂದಿದೆ. ಹಿಂದಿನ ಸರ್ಕಾರ ಭ್ರಷ್ಟಾಚಾರ ಮಾಡಿರಲಿಲ್ವಾ ಅಂತ ಹೇಳುವ ರೋಗ ಬಸವರಾಜ್ ಬೊಮ್ಮಾಯಿಗೆ ಬಂದಿದೆ. ಹಿಂದಿನ ಸರ್ಕಾರ ಭ್ರಷ್ಟಾಚಾರ ಮಾಡಿದ್ದಾರೆ ಅಂತ ಡಿಪೆಂಡ್ ಮಾಡಿಕೊಳ್ಳಲು ಸಿಎಂ ಮುಂದಾಗ್ತಿದ್ದಾರೆ. ಹಿಂದಿನ ಸರ್ಕಾರ ಮರ್ಡರ್ ಮಾಡಿದೆ ಅಂದ್ರೆ ನೀನು ಮರ್ಡರ್ ಮಾಡ್ತಿಯ..? ಎಂದು ಪ್ರಶ್ನಿಸಿದರು.
ಮರ್ಡರ್ ಮಾಡಿದ್ದಾಗ ಯಾಕೆ ಮಾತನಾಡದೆ ಸುಮ್ಮನೆ ಕುಳಿತುದ್ದೆ.? ಕಾಂಗ್ರೆಸ್ ಭ್ರಷ್ಟಾಚಾರ ಮಾಡುವಾಗ ಸುಮ್ಮನೆ ಯಾಕಿದೆ.? ಆಗ ನೀನು ವಿರೋಧ ಪಕ್ಷದಲ್ಲಿ ಇದ್ದಲ್ಲಪ್ಪ. ಅವರ ಆರೋಪಕ್ಕೆ ಏನಾದರೂ ಅರ್ಥ ಇದ್ಯಾ..? ಎಂದು ಪ್ರಶ್ನಿಸಿದರು. ಇದೇ ವೇಳೆ ಸಿಎಂ ಗೆ ನಡ್ಡ ಅವರು ಶಬಾಷ್ ಗಿರಿ ಕೊಟ್ಟ ವಿಚಾರ ಮಾತನಾಡಿ, ಸಿಎಂಗೆ ನಡ್ಡ ಶಬಾಷ್ ಕೊಡುವುದಲ್ಲ ಜನ ಕೊಡಬೇಕು ಎಂದರು.
ವರದಿ: ಗಿರೀಶ್ ರಾಜ್, ಮಂಡ್ಯ