ಬೆಂಗಳೂರು: ಮತಾಂತರವನ್ನು ನಿಷೇಧಿಸಿ ರಾಜ್ಯ ಸರ್ಕಾರ ( Karnataka Government ) ಅಧಿಕೃತವಾಗಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಿಷೇಧವನ್ನು ಪ್ರಶ್ನಿಸಿ ಇಂದು ಹೈಕೋರ್ಟ್ ಗೆ ( Karnataka High Court ) ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡಿತು. ಆದ್ರೇ ಬಲವಂತದ ಮತಾಂತರ ಆರೋಪ ಹೊತ್ತಿದ್ದವನಿಂದಲೇ ಪಿಐಎಲ್ ಸಲ್ಲಿಸಿದ್ದರ ಬಗ್ಗೆ ಸರ್ಕಾರ ಆಕ್ಷೇಪಿಸಿದೆ. ಅಲ್ಲದೇ ಇದನ್ನು ಪಿಐಎಲ್ ಆಗಿ ಪರಿಗಣಿಸದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದೆ.
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ವಿಕ್ಟರ್ ಮಾರ್ಟಿನ್ ಎಂಬುವರು ಸಲ್ಲಿಸಿದ್ದರು. ಇಂದು ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠದಿಂದ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು.
ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ ಅವರು ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವಂತ ವಿಕ್ಟರ್ ಮಾರ್ಟಿನ್ ವಿರುದ್ಧವೇ ಬಲವಂತದ ಮತಾಂತರ ನಿಷೇಧದ 2 ಕೇಸ್ ಗಳು ದಾಖಲಾಗಿದ್ದಾವೆ. ಅರ್ಜಿದಾರರ ವಿರುದ್ಧವೇ ಕ್ರಿಮಿನಲ್ ಕೇಸ್ ಗಳಿವೆ. ಇಂತಹ ವ್ಯಕ್ತಿ ಸಲ್ಲಿಸಿರುವಂತ ಅರ್ಜಿಯನ್ನು ಪಿಎಲ್ಐ ಆಗಿ ಪರಿಗಣಿಸದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಸರ್ಕಾರದ ಪರ ಅಡ್ವಕೇಟ್ ಜನರಲ್ ಹೇಳಿಕೆ ಆಲಿಸಿದಂತ ನ್ಯಾಯಪೀಠವು, ಅರ್ಜಿದಾರರಿಗೆ ಹೈಕೋರ್ಟ್ ವಿಭಾಗಿಯ ಪೀಠವು ಇದನ್ನು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ಪರಿಗಣಿಸುವುದು ಹೇಗೆ ಎಂದು ಪ್ರಶ್ನಿಸಿತು. ಅಲ್ಲದೇ ಈ ಬಗ್ಗೆ 1 ವಾರದಲ್ಲಿ ಪ್ರತಿಕ್ರಿಯಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿ, ನವೆಂಬರ್ 28ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.