ಮಂಗಳೂರು : ಭಯೋತ್ಪಾದನೆ ಕೃತ್ಯಗಳಿಗೆ ಹಿಂದಿನ ಸರ್ಕಾರಗಳೇ ಕಾರಣ ಎಂಬ ಆರಗ ಜ್ಞಾನೇಂದ್ರ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಗೃಹ ಸಚಿವರಿಗೆ ತಮ್ಮ ಗೃಹ ಖಾತೆಯನ್ನು ಹೇಗೆ ನಿಭಾಯಿಸಬೇಕೆಂಬುದೇ ಗೊತ್ತಿಲ್ಲ, ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದಾಗಲೇ ಮೆರವಣಿಗೆ ನಡೆಸುತ್ತಾರೆ, ಮೈಸೂರಿನಲ್ಲಿ ಅತ್ಯಾಚಾರ ನಡೆದಾಗ 7:30 ಕ್ಕೆ ಆ ಹೆಣ್ಣು ಮಕ್ಕಳು ಅಲ್ಲಿಗ್ಯಾಕೆ ಹೋಗಬೇಕಿತ್ತು ಎಂದು ಹೇಳುತ್ತಾರೆ, ಗೃಹ ಸಚಿವರಿಗೆ ತಮ್ಮ ಗೃಹ ಖಾತೆಯನ್ನು ಹೇಗೆ ನಿಭಾಯಿಸಬೇಕೆಂಬುದೇ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ದೇಶದಲ್ಲಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ, ಅವರನ್ನು ನಿಯಂತ್ರಣ ಮಾಡೋಕೆ ಇವರ ಕೈಯಲ್ಲಿ ಆಗಲ್ಲ, ಕೈಲಾಗದವರು ಮೈ ಪರಚಿಕೊಂಡ ಹಾಗಿದೆ ಇವರ ಕಥೆ, ಉತ್ತರನ ಪೌರುಷ ಒಲೆ ಮುಂದೆ ಎನ್ನುವ ಹಾಗೆ ಇವರ ಪರಿಸ್ಥಿತಿ , ಹಾಗಾಗಿ ಬಿಜೆಪಿಯವರು ಕಾಂಗ್ರೆಸ್ ಮೇಲೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಕಿಡಿಕಾರಿದರು.
BREAKING NEWS : ಪೋಕ್ಸೋ ಕೇಸ್ : ಮುರುಘಾ ಶ್ರೀ ಸೇರಿ ಮೂವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ನ.25 ರವರೆಗೆ ವಿಸ್ತರಣೆ