ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಬೆನ್ನಲ್ಲೇ, ರಾಜ್ಯಾಧ್ಯಂತ ಪೊಲೀಸರ ಹೈ-ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ವಿವಿಧ ಗಡಿ ಭಾಗಗಳಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಪಾಸಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
‘ಪಡಿತರ ಚೀಟಿದಾರ’ರಿಗೆ ಬಿಗ್ ಶಾಕ್ ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ, ಆ ಎಲ್ಲ ‘ಕಾರ್ಡ್’ ರದ್ದು
ಇನ್ನೂ ಶಂಕಿತ ಉಗ್ರ ತಾರೀಕ್ ಇದ್ದಂತ ತೀರ್ಥಹಳ್ಳಿಯ ಮನೆಗೂ 15ಕ್ಕೂ ಹೆಚ್ಚು ಪೊಲೀಸರನ್ನು ಒಳಗೊಂಡತ ತಂಡವು ಭೇಟಿ ನೀಡಿ, ಪರಿಶೀಲನೆಯಲ್ಲಿ ತೊಡಗಿದೆ. ಉಗ್ರನ ಪರಿಚಿತರನ್ನು ವಿಚಾರಣೆಗೂ ಒಳಪಡಿಸಿದೆ ಎನ್ನಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಬೆನ್ನಲ್ಲೇ ಅಲರ್ಟ್ ಆಗಿದ್ದಾರೆ. ಗಡಿ ಭಾಗಗಳಲ್ಲಿ ಆಗಮಿಸುವಂತ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ.