ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ( Indonesia’s West Java province ) ಇಂದು ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ( 5.6-magnitude quake ) 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿರೋದಾಗಿ ಅಧಿಕೃತವಾಗಿ ತಿಳಿದು ಬಂದಿದೆ.
ಭೂಕಂಪದ ಕೇಂದ್ರಬಿಂದುವಾಗಿದ್ದ ಪಶ್ಚಿಮ ಜಾವಾದ ಸಿಯಾಂಜೂರಿನ ಸರ್ಕಾರಿ ಅಧಿಕಾರಿ ಹರ್ಮನ್ ಸುಹೆರ್ಮನ್ ಅವರು ಸುದ್ದಿ ಚಾನೆಲ್ ಮೆಟ್ರೋಟಿವಿಗೆ ಈ ಪ್ರದೇಶದ ಒಂದು ಆಸ್ಪತ್ರೆಯಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
BREAKING NEWS: ಮಂಗಳೂರು ಕುಕ್ಕರ್ ಬ್ಲಾಸ್: ಮೈಸೂರಿನಲ್ಲಿ ಮನೆ ಮಾಲೀಕ, ಮೊಬೈಲ್ ಕೊಟ್ಟವರು ಸೇರಿ ನಾಲ್ವರ ಬಂಧನ
ಭೂಕಂಪನದಿಂದ ತತ್ತರಿಸಿರುವಂತ ಇಂಡೋನೇಷ್ಯಾದಲ್ಲಿ ರಕ್ಷಣಾ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಮನೆ ಕುಸಿತದಿಂದ ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವಂತ ಶಂಕೆಯನ್ನು ಕೂಡ ಸ್ಥಳೀಯ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.