ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ನೊಂದ ಯುವತಿಯು ಯುವಕ ಸೇರಿದಂತೆ ಮೂವರ ವಿರುದ್ಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
BREAKING NEWS : ‘ಮಾಜಾ ಟಾಕೀಸ್ ಖ್ಯಾತಿ’ಯ ‘ನವೀನ್ ಡಿ ಪಡೀಲ್ ಶೋಟಿಂಗ್’ ವೇಳೆ ಅವಘಡ : ಆಸ್ಪತ್ರೆಗೆ ದಾಖಲು
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹರಿಹರಪುರ ಪೊಲಸ್ ಠಾಣೆಗೆ ದೂರು ನೀಡಿದ್ದು, ಕಳೆದ 3 ವರ್ಷದಿಂದ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದು ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾವು ತಿನ್ನೋ ಆಹಾರದಿಂದಲೂ ʻಹೊಟ್ಟೆ ಕ್ಯಾನ್ಸರ್ʼ ಅಭಿವೃದ್ಧಿ: ಸಂಶೋಧನೆಯಿಂದ ಬಯಲಾದ ಸತ್ಯಾಂಶ ಇಲ್ಲಿದೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಮಹಮ್ಮದ್ ರೌಫ್ ಎಂಬಾತ ಬಲವಂತವಾಗಿ ಅಮಲು ಪದಾರ್ಥಗಳ ಜ್ಯೂಸ್ ಕುಡಿಸಿ ತಾಳಿ ಕಟ್ಟಿದ್ದನು. ನಂತರ ದೈಹಿಕವಾಗಿ ಬಳಸಿಕೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕಿದ್ದನು. ಸದ್ಯ ವಿದೇಶದಲ್ಲಿರುವ ರೌಫ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾನೆ. ಸಂತ್ರಸ್ತೆ ರೌಫ್ ಜೊತೆಯಲ್ಲಿ ಇರ್ಫಾನ್, ಸೈಫ್ ಸೇರಿದಂತೆ ಮೂವರ ಮೇಲೆ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ರೋಫ್ ವಿರುದ್ಧ ಸಂತ್ರಸ್ತೆ ಸೋದರ ದೂರು ದಾಖಲಿಸಿದ್ದರು.