ಬೆಂಗಳೂರು: ಸಚಿವ ಅಶ್ವತ್ಥ ನಾರಾಯಣ ( Minister Ashwanthanaraya ) ಅವರ ದೂರವಾಣಿ ಸಂಖ್ಯೆ, ಅವರ ಚೆಕ್, ಲೆಟರ್ ಹೆಡ್, ಲೆಟರ್ ಪ್ಯಾಡ್, ಸೀಲ್ ಗಳು, ನೋಟು ಎಣಿಕೆ ಯಂತ್ರ ಎಲ್ಲವೂ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಯಾಕೆ ಸಿಕ್ಕಿವೆ? ಏನಿದರ ಅಸಲಿಯತ್ತು? ಚಿಲುಮೆ, ಹೊಂಬಾಳೆ ಎರಡೂ ಸಂಸ್ಥೆಯಲ್ಲಿ ಒಂದೇ ಟೀಂ ಕೆಲಸ ಮಾಡಿದೆ. ಫ್ರೀ ಆಗಿ ಕೆಲಸ ಮಾಡ್ತೀವಿ ಅಂತ ಹೇಳಿದ್ದವರ ಕಚೇರಿಯಲ್ಲಿ ನೋಟು ಎಣಿಸುವ ಯಂತ್ರ ಯಾಕೆ ಬಂತು. ಸಿನಿಮಾದಲ್ಲಿ ಬಂದ ದುಡ್ಡನ್ನು ಇಲ್ಲಿ ಏಣಿಸ್ತಿದ್ರಾ? ಬ್ಲಾಕ್ ಮನಿ ವೈಟ್ ಮಾಡ್ತಿದ್ರಾ? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಿಂದೆ ನಕಲಿ ಅಂಕಪಟ್ಟಿ ತಯಾರು ಮಾಡಿ ಅಕ್ರಮ ಮಾಡಿದಂತೆ ಈಗ ಮತದಾರ ಪಟ್ಟಿಯಲ್ಲಿ ಅಕ್ರಮ ಮಾಡಿದ್ದಾರೆ. ಇದೆಲ್ಲವೂ ಸಚಿವರ ಉಸ್ತುವಾರಿಯಲ್ಲೇ ನಡೆದಿದೆ. ಮತದಾರರ ಮಾಹಿತಿ ಕಳವು ಪ್ರಕರಣವನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ನಡೆಸುವುದು ಸೇರಿದಂತೆ ಅನೇಕ ಮನವಿಗಳನ್ನು ಕಾಂಗ್ರೆಸ್ ಪಕ್ಷದ ( Congress Party ) ನಾಯಕರು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಮಾಡಿದ್ದಾರೆ.
BIG NEWS: ಮಂಗಳೂರಿನಲ್ಲಿ ‘ಬಾಂಬ್ ಬ್ಲಾಸ್ಟ್’ಗೂ PFIಗೂ ನಂಟು? ಈ ಬಗ್ಗೆ ‘ಸಿಎಂ ಬೊಮ್ಮಾಯಿ’ ಹೇಳಿದ್ದೇನು ಗೊತ್ತಾ?
ಕೇಂದ್ರ ಚುನಾವಣೆ ಆಯೋಗದ ( Central Election Commission ) ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಕೆ ಆರ್ ವೃತ್ತ ಸಮೀಪದ ಅವರ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತಿತರ ನಾಯಕರು ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದರು.
• ಈ ಪ್ರಕರಣದಲ್ಲಿ ಬಿಎಲ್ಒ ಆಗಿ ಗುರುತಿನ ಚೀಟಿ ವಿತರಣೆ ಮಾಡಿರುವ ಜಿಲ್ಲಾ ಚುನಾವಣಾಧಿಕಾರಿ, ವಿಧಾಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
• ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿರುವ ಹಾಗೂ ಸೇರ್ಪಡೆಯಾಗಿರುವ ಹೆಸರುಗಳ ಪಟ್ಟಿಯನ್ನು ಪರಿಶೀಲನೆ ನಡೆಸಬೇಕು. ಚುನಾವಣಾ ಆಯೋಗದ ನೈಜ್ಯ ಅಧಿಕಾರಿಗಳು ಇದರ ಪರಿಶೀಲನೆ ಮಾಡಬೇಕು.
• ಮತದಾರರ ಪಟ್ಟಿಯನ್ನು ಎಲ್ಲ ಪಕ್ಷಗಳಿಗೆ ನೀಡಬೇಕು. ಅಲ್ಲದೆ ಬೂತ್ ಮಟ್ಟದ ಏಜೆಂಟರ ಜತೆ ಮನೆ ಮನೆಗೆ ಹೋಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು.
• ಈ ಪ್ರಕರಣದಲ್ಲಿ ಸರಿಯಾಗಿ ದೂರು ನೀಡಿಲ್ಲ, ಎಫ್ಐಆರ್ ದಾಖಲಿಸಿಲ್ಲ. ಈ ಪ್ರಕರಣವನ್ನು ರಾಜ್ಯ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು.
• ಸಂಸ್ಥೆಯ ಆಡಳಿತ ಮಂಡಳಿ ಅವರ ಸಂಪರ್ಕದಲ್ಲಿರುವ ಸಚಿವರು, ಅಧಿಕಾರಿಗಳನ್ನು ಬಂಧಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
‘ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಸತ್ಯಾಂಶವನ್ನು ಜನತೆ ಮುಂದೆ ಇಟ್ಟಿರುವ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಕಾಂಗ್ರೆಸ್ ಪಕ್ಷದ ಹಾಗೂ ರಾಜ್ಯದ ಮತದಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಅರಿವಾಗಿ ಬಿಜೆಪಿ ಈ ರೀತಿ ದೊಡ್ಡ ಷಡ್ಯಂತ್ರ ಮಾಡುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿ ಇರುವ ಕಡೆ ಖಾಸಗಿ ಸಂಸ್ಥೆಗಳ ಮೂಲಕ ಚುನಾವಣಾ ಆಯೋಗದ ಮಾಹಿತಿ, ಪಾಸ್ ವರ್ಡ್, ಕೋಡ್ ಗಳನ್ನು ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು, ಕಾರ್ಯಕರ್ತರು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದರು.
ಕರ್ನಾಟಕ ಪೊಲೀಸರೇ ತಲೆತಗ್ಗಿಸೋ ಘಟನೆ: ಏನದು ಅಂತ ಈ ಸುದ್ದಿ ಓದಿ, ನಿಮಗೆ ಗೊತ್ತೆ.! | Karnataka Police
ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಇರಬೇಕು. ಯಾರ ಹೆಸರು ಇರಬಾರದು ಎಂದು ಇವರು ತೀರ್ಮಾನಿಸಿದ್ದಾರೆ. ಈ ಬಾರಿ 27 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮನೆ ಮನೆಗೆ ಹೋಗಿ ಮತದಾರರ ಹೆಸರನ್ನು ಕೈಬಿಡುವ ಹಾಗೂ ಸೇರಿಸುವ ಪ್ರಕ್ರಿಯೆ ಮಾಡಿಲ್ಲ. ಮುಖ್ಯ ಚುನಾವಣಾ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರೇ ಖಾಸಗಿ ಸಂಸ್ಥೆಗಳಿಗೆ ಬಿಎಲ್ಒಗಳ ನೇಮಕ ಮಾಡುವ ಅಧಿಕಾರವಿಲ್ಲ, ಇದನ್ನು ಸರ್ಕಾರ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳೇ ಮಾಡಬೇಕು ಎಂದು ಹೇಳಿದ್ದಾರೆ.
ಹೀಗಾಗಿ ಟ್ರಸ್ಟ್ ಮೂಲಕ ಸಾವಿರಾರು ಮಂದಿಗೆ ಹೇಗೆ ಬಿಎಲ್ಒ ಆಗಿ ಗುರುತಿನ ಚೀಟಿ ನೀಡಲಾಗಿದೆ. ಇದುವರೆಗೂ ಯಾವುದೇ ಪ್ರಮುಖ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿಲ್ಲ, ಆವರ ಬಂಧನವಾಗಿಲ್ಲ. ಯಾವ ಸಚಿವರು ಇದಕ್ಕೆ ಬೆಂಬಲ ನೀಡಿ, ಇದರ ಸೂತ್ರಧಾರರಾಗಿದ್ದಾರೆಯೋ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಮೂವರು ಮಂತ್ರಿಗಳು, ಇಬ್ಬರು ಶಾಸಕರು ಚಿಲುಮೆ ಸಂಸ್ಥೆ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ತಿಳಿಸಿದರು.
ಮದುವೆ ಮನೆಯಲ್ಲೇ ಸಿದ್ದು ‘ಚುನಾವಣಾ ಪ್ರಚಾರ’ : ಕೊಪ್ಪಳ ಜಿಲ್ಲೆಯ 5 ಅಭ್ಯರ್ಥಿಗಳ ಘೋಷಣೆ
ಆಯುಕ್ತರು ತಮ್ಮ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕಲು ಮುಂದಾಗುತ್ತಿರುವುದು ನಾಚಿಕೆಗೇಡಿನ ವಿಚಾರ. ಈ ಪ್ರಕರಣವನ್ನು ಪ್ರಾದೇಶಿಕ ಅಧಿಕಾರಿಗಳ ತನಿಖೆಗೆ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಅಧಿಕಾರಿಗಳು ಪಾಲಿಕೆ ನಿಯಂತ್ರಣದಲ್ಲಿರುವ ಅಧಿಕಾರಿಯಾಗಿದ್ದು ಇವರಿಂದ ನ್ಯಾಯ ಹೇಗೆ ಸಿಗಲಿದೆ? ಎಂದು ಪ್ರಶ್ನಿಸಿದರು.
ಹೊಂಬಾಳೆ ಪ್ರೈ.ಲಿ ಕಂಪನಿಯಲ್ಲಿರುವವರೇ ಚಿಲುಮೆ ಸಂಸ್ಥೆಯಲ್ಲೂ ಇದ್ದಾರೆ. ಇದು 2019 ರಿಂದ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ. ಮತದಾರರ ನಕಲಿ ಗುರುತಿನ ಚೀಟಿ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದೆ. ಅವರ ಕ್ಷೇತ್ರದಲ್ಲಿ ಈ ರೀತಿ ಮತದಾರರ ಮಾಹಿತಿ ಕಲೆಹಾಕಲಾಗಿದೆ. ನಾವು ಈ ಪ್ರಕರಣ ಬಯಲಿಗೆಳೆದ ಹಿನ್ನೆಲೆಯಲ್ಲಿ ನೆಪಮಾತ್ರಕ್ಕೆ ಒಂದು ಸಣ್ಣ ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಸ್ಥೆ ನಿರ್ದೇಶಕರನ್ನು ಈವರೆಗೂ ಬಂಧಿಸಿಲ್ಲ. ನಿನ್ನೆ ಆ ಸಂಸ್ಥೆ ಕಚೇರಿಯಲ್ಲಿ ನೋಟು ಏಣಿಕೆ ಯಂತ್ರ ಲಭಿಸಿದೆ. ಈ ಸಂಸ್ಥೆಗೆ ದುಡ್ಡಿಲ್ಲ ಎಂದ ಮೇಲೆ ನೋಟು ಏಣಿಕೆ ಯಂತ್ರ ಯಾಕೆ? ಎಂದರು.
ಹಿಂದೆ ಅಂಕಪಟ್ಟಿಯನ್ನು ತಯಾರಿಸುತ್ತಿದ್ದವರು ಈಗ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದಾರೆ. ನಾವು ಪೊಲೀಸ್ ಆಯುಕ್ತರಿಗೆ ಈ ವಿಚಾರವಾಗಿ ದೂರು ನೀಡಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡೋಣ. ಪೊಲೀಸರು ಈಗ ಒಂದಿಬ್ಬರು ನಕಲಿ ಬಿಎಲ್ಒ ಕಾರ್ಡ್ ದಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಗುರುತಿನ ಚೀಟಿ ಕೊಟ್ಟವರು, ಚೆಕ್ ನೀಡಿರುವವರ ಮೇಲೆ, ಈ ನಕಲಿ ಗುರುತಿನ ಚೀಟಿ ಪಡೆದಿರುವವರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್
ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಈ ವಿಚಾರವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಜತೆಗೆ ರಾಜ್ಯದ ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಾನು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸುಮೋಟೋ ಪ್ರಕರಣ ದಾಖಲಿಸಿದಂತೆ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ನಿಮ್ಮ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ನಕಲಿ ಮತಗಳು ಕೈ ತಪ್ಪಲಿವೆ ಎಂಬ ಕಾರಣಕ್ಕೆ ಈ ಆರೋಪ ಮಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ವಿಚಾರವಾಗಿ ಪ್ರಶ್ನೆ ಕೇಳಿದಾಗ, ‘ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಪಾಲಿಕೆ ಆಯುಕ್ತರು ಈ ಸಂಸ್ಥೆಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದ್ದು, ಅವರು ಬೆಂಗಳೂರು ಉಸ್ತುವಾರಿ ಯಾಕಾಗಿದ್ದಾರೆ? ಇದಕ್ಕೂ ಅವರಿಗೂ ಸಂಬಂಧವಿಲ್ಲವದಿದ್ದರೆ ಈ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ನೀಡಲಿ. ಇದಕ್ಕೆ ಅವರು ಹೆದರುತ್ತಿರುವುದೇಕೆ? ಅವರು ಧಮ್ಮು ತಾಕತ್ತಿನ ಮಾತನಾಡುತ್ತಾರಲ್ಲ ಈಗ ನಿಮ್ಮ ಧಮ್ಮು ತಾಕತ್ತು ತೋರಿಸಿ. ಇಲ್ಲಿ ಮತದಾರರ ಮಾಹಿತಿ ದುರ್ಬಳಕೆ ಆಗಿದೆ ಎಂದು ಬಿಬಿಎಂಪಿ ಆಯುಕ್ತರು ಒಪ್ಪಿಕೊಂಡಿದ್ದಾರೆ. ಈ ದುರ್ಬಳಕೆ ಯಾವ ಮಟ್ಟದಲ್ಲಿ ಆಗಿದೆ ಎಂಬ ತನಿಖೆ ಆಗಬೇಕಲ್ಲವೇ? ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಇವರ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದು ಎಷ್ಟು ಸರಿ?’ ಎಂದು ಸವಾಲು ಹಾಕಿದರು.
ನಿಮ್ಮ ವಿರುದ್ಧವೂ ಈಗ ದೂರು ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಕಾಲದಲ್ಲಿ ಮತದಾರರ ಮಾಹಿತಿ ದುರ್ಬಳಕೆ ಆಗಿದೆ ಎಂದು ದೂರು ನೀಡುವುದಾದರೆ ನೀಡಲಿ. ನಮ್ಮ ಕಾಲದಲ್ಲಿ ತಪ್ಪಾಗಿದೆ ಎಂದು ನೀವು ಅದೇ ತಪ್ಪು ಮಾಡುವುದು ಎಷ್ಟು ಸರಿ? ಈ ಸಂಸ್ಥೆ ಅಕ್ರಮ ಎಸಗಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಆಯುಕ್ತರು ತಮ್ಮ ಆದೇಶ ಹಿಂಪಡೆದಿದ್ದಾರೆ. ಆದರೆ ಯಾವ ತಪ್ಪು ಮಾಡಿದ್ದಾರೆ ಎಂದು ತಿಳಿಸಿಲ್ಲ. ನಮ್ಮ ವಿರುದ್ಧ ತನಿಖೆ ನಡೆಸಿದರೂ ನಾವು ಅದನ್ನು ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು. ಇದು ವ್ಯಕ್ತಿಗಳ ವಿಚಾರವಲ್ಲ. ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಪೈಕಿ ಯಾರು ಎಷ್ಟು ಜನರಿಗೆ ಬಿಎಲ್ಒ ಗುರುತಿನ ಚೀಟಿ ವಿತರಿಸಿದ್ದಾರೆಯೋ ಅವರೆಲ್ಲರನ್ನು ಬಂಧಿಸಬೇಕು. ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದರು.
ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ಮೃದು ಧೋರಣೆ ಅನುಸರಿಸುತ್ತಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ‘ಕುಮಾರಸ್ವಾಮಿ ಅಥವಾ ಬೇರೆ ಪಕ್ಷದವರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ಪಕ್ಷದ ಅಧ್ಯಕ್ಷನಾಗಿ ಹಾಗೂ ಜನಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ. ಬೇರೆ ನಾಯಕರ ಮಾತಿಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ’ ಎಂದರು.
ಜನಪ್ರತಿನಿಧಿ ಕಾಯ್ದೆ ಪ್ರಕಾರ ಈ ಪ್ರಕರಣ ಕ್ರಿಮಿನಲ್ ಅಪರಾಧವಾಗಿದ್ದು, ಇದನ್ನು ಹೇಗೆ ಪರಿಗಣಿಸುತ್ತೀರಾ ಎಂದು ಕೇಳಿದಾಗ, ‘ಇದು ಮತದಾನದ ಹಕ್ಕನ್ನು ಕಸಿದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವಂತಹ ಅಪರಾಧವಾಗಿದೆ’ ಎಂದರು.
ಕಾಂಗ್ರೆಸ್ ನಾಯಕರು ಅಶ್ವತ್ಥ್ ನಾರಾಯಣ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆರ್ಗೆ , ‘ಈ ಖಾಸಗಿ ಸಂಸ್ಥೆ ನಿರ್ದೇಶಕರ ಹುಟ್ಟುಹಬ್ಬಕ್ಕೆ ಪಿ.ಸಿ ಮೋಹನ್ ಯಾಕೆ ಹೋಗಲಿಲ್ಲ ಅವರು ಯಾಕೆ ಭಾಗಿಯಾಗಿಲ್ಲ? ಈ ಸಂಸ್ಥೆ ಜತೆ ಯಾರಿಗೆ ಸಂಪರ್ಕವಿದೆಯೋ ಅವರ ವಿರುದ್ದ ಆರೋಪ ಮಾಡುತ್ತಿದ್ದೇವೆ. ಈ ಸಂಸ್ಥೆ ನಿರ್ದೇಶಕರ ಜತೆ ಯಾರು ದೂರವಾಣಿ ಸಂಪರ್ಕದಲ್ಲಿದ್ದರು ಎಂದು ದಾಖಲೆ ಪರಿಶೀಲಿಸಿ, ಆಗ ಯಾರು ಎಷ್ಟು ದಿನ, ಎಷ್ಟು ಹೊತ್ತು ಸಂಪರ್ಕದಲ್ಲಿದ್ದರು ಎಂದು ತಿಳಿಯುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದವರೇ ನನಗೆ ಕೆಲವು ಮಾಹಿತಿ ತಂದುಕೊಟ್ಟಿದ್ದಾರೆ’ ಎಂದರು.