ಚಿಕ್ಕಮಗಳೂರು: ಕಾನೂನು ರಕ್ಷಣೆ, ನೊಂದವರಿಗೆ ನೆರವಾಗಬೇಕಿದ್ದಂತ ಪೊಲೀಸರು ಮಾಡಿದ್ದು ಮಾತ್ರ ಕರ್ನಾಟಕ ಪೊಲೀಸರೇ ( Karnataka Police ) ತಲೆತಗ್ಗಿಸುವಂತದ್ದು. ಅದೇ ಚಿನ್ನವನ್ನು ಅಂಗಡಿಯೊಂದಕ್ಕೆ ತಲುಪಿಸೋದಕ್ಕೆ ಹೊರಟಿದ್ದಂತ ವ್ಯಾಪಾರಿಯ ಮಗನನ್ನೇ ಬೆದರಿಸಿ, ಕೇಸ್ ಹಾಕೋದಾಗಿ ಹೆದರಿಸಿದ್ದಾರೆ. ಅಲ್ಲದೇ ಅವರಿಂದ 5 ಲಕ್ಷವನ್ನು ದರೋಡೆ ಮಾಡಿರೋದಾಗಿದೆ. ಆ ಬಗ್ಗೆ ಮುಂದೆ ಓದಿ..
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ. ಚಿನ್ನದ ವ್ಯಾಪಾರಿಯನ್ನು ಬೆದರಿಸಿದ ಪೊಲೀಸರು 5 ಲಕ್ಷ ದರೋಡೆ ಮಾಡಿದ್ದಾರೆ.
BIG NEWS: ಮಂಗಳೂರಿನಲ್ಲಿ ‘ಬಾಂಬ್ ಬ್ಲಾಸ್ಟ್’ಗೂ PFIಗೂ ನಂಟು? ಈ ಬಗ್ಗೆ ‘ಸಿಎಂ ಬೊಮ್ಮಾಯಿ’ ಹೇಳಿದ್ದೇನು ಗೊತ್ತಾ?
ಕಳೆದ ಮೇ ತಿಂಗಳಿನಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಬಯಲಿಗೆ ಬಂದಿದೆ. ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬುವವರ ಪುತ್ರ ರೋಹಿತ್ ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ.
ಭಗವಾನ್ ಪುತ್ರ ರೋಹಿತ್ 2 ಕೆಜಿ ಚಿನ್ನವನ್ನು ಬೇಲೂರಿನ ವರ್ತಕರಿಗೆ ನೀಡಲು ಹೋಗುವಾಗ ಪೊಲೀಸರು 10 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಆಗ ಭಗವಾನ್ ಇದಕ್ಕೆ ಸಂಬಂಧಪಟ್ಟ ಕಾನೂನು ಬದ್ದ ದಾಖಲೆಗಳನ್ನು ನೀಡಿದರೂ ಕೂಡ ಪೊಲೀಸರು ಹಣಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರ ಒತ್ತಾಯಕ್ಕೆ ಮಣಿದ ರೋಹಿತ್ ಕೊನೆಗೆ 5 ಲಕ್ಷ ನೀಡಿದ್ದಾರೆ.
‘ಸಾಮಾನ್ಯ ಸಂವಹನ ಯೋಜನೆ’ಗೆ ಕೇಂದ್ರ ಸರ್ಕಾರ ಅನುಮೋದನೆ ; ‘ಸಮುದ್ರ ಮಾರ್ಗ’ ಮೇಲ್ವಿಚಾರಣೆಗೆ ಏಜೆನ್ಸಿಗಳು ಸಜ್ಜು
ಈ ಎಲ್ಲಾ ಘಟನೆ ದಿನಾಂಕ 11-05-2022ರಂದು ನಡೆದಿದೆ. ಈ ಬಳಿಗ ಭಗವಾನ್ ಅವರ ರಾಜಸ್ಥಾನದ ಕುಟುಂಬಸ್ಥರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದ ಕಾರಣ, ಅಲ್ಲಿಗೆ ತೆರಳಿದ್ದಾರೆ. ಆ ಕಾರ್ಯ ಮುಗಿಸಿಕೊಂಡು ಬಂದು ಸ್ನೇಹಿತರು, ಕುಟುಂಬಸ್ಥರ ಸಲಹೆಯ ಮೇರೆಗೆ, ದಿನಾಂಕ 17-11-2022ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ದೂರು ನೀಡಿದ್ದಾರೆ.
ಬಂಗಾರದ ವ್ಯಾಪಾರಿ ಭಗವಾನ್ ನೀಡಿದಂತ ದೂರಿನ ಆಧಾರದ ಮೇಲೆ ಅಜ್ಜಂಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಲಿಂಗರಾಜು, ಪೇದೆಗಳಾದಂತ ಧನಪಾಲ್ ನಾಯಕ್, ಒಂಕಾರ ಮೂರ್ತಿ, ಶರತ್ ರಾಜ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಮೂಲಕ ತನಿಖೆಯನ್ನು ಪೊಲೀಸರ ಮೇಲೆ, ಪೊಲೀಸರೇ ದಾಖಲಿಸಿ, ತನಿಖೆಯನ್ನು ನಡೆಸುತ್ತಿದ್ದಾರೆ.