ಬೆಂಗಳೂರು: ಐತಿಹಾಸಿಕ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಚಾಲನೆ ನೀಡಿದ್ದಾರೆ. ಈ ಮೂಲಕ ಇತಿಹಾಸ ಪ್ರಸಿದ್ಧ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿನ ಕಡಲೆಕಾಯಿ ಪರಿಷೆ ಆರಂಭಗೊಂಡಿದೆ.
ಈ ಹಿಂದೆ ಕಡಲೆಕಾಯಿ ಪರಿಷೆಯ ವೇಳೆ ಕೆಂಪಾಂಬುಂಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷದಲ್ಲಿ ಇದು ಸ್ಥಗಿತಗೊಂಡಿದ್ದು, ಈ ವರ್ಷ ಮತ್ತೆ ಕೆಂಪಾಂಬುಂಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲು ತೀರ್ಮಾನಿಸಲಾಗಿದೆ.
‘ಸಾಮಾನ್ಯ ಸಂವಹನ ಯೋಜನೆ’ಗೆ ಕೇಂದ್ರ ಸರ್ಕಾರ ಅನುಮೋದನೆ ; ‘ಸಮುದ್ರ ಮಾರ್ಗ’ ಮೇಲ್ವಿಚಾರಣೆಗೆ ಏಜೆನ್ಸಿಗಳು ಸಜ್ಜು
ಇಂದು ಆರಂಭಗೊಂಡಿರುವಂತ ಕಡಲೆಕಾಯಿ ಪರಿಷೆ, ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಕಡಲೆಕಾಯಿ ಪರಿಷೆ, ತೆಪ್ಪೋತ್ಸವ ಜೊತೆಗೆ ಬ್ಯೂಗಲ್ ರಾಕ್ ನತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.
ಬರೋಬ್ಬರಿ ಐದು ದಶಕಗಳ ಕಾಲದ ಇತಿಹಾಸ ಹೊಂದಿರುವನ್ನು ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಹೊಂದಿದೆ. ಈ ಪರಿಷೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚರಿಕೆ ಕ್ರಮವಾಗಿ ಹಲವು ಕಡೆ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
BIG NEWS: ಮಂಗಳೂರಿನಲ್ಲಿ ‘ಬಾಂಬ್ ಬ್ಲಾಸ್ಟ್’ಗೂ PFIಗೂ ನಂಟು? ಈ ಬಗ್ಗೆ ‘ಸಿಎಂ ಬೊಮ್ಮಾಯಿ’ ಹೇಳಿದ್ದೇನು ಗೊತ್ತಾ?
ಭಕ್ತಾದಿಗಳಿಗೆ ಮಾಹಿತಿ ನೀಡಲು ಹೋಂ ಗಾರ್ಡ್ಸ್, ಪೋಲೀಸ್ ಇಲಾಖೆ ಹಾಗೂ ಧ್ವನಿವರ್ಧಕಗಳನ್ನು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯ್ ಪುರ ಮಾಹಿತಿ ನೀಡಿದ್ದಾರೆ.