ಧೋರಾಜಿ : ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಧೋರಾಜಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ನಾಯಕ ಮತ್ತು ಅವರ ಭಾರತ್ ಜೋಡೋ ಯಾತ್ರೆಯ ವಿರುದ್ಧ ವಾಗ್ದಾಳಿ ನಡೆಸಿದರು. ನರ್ಮದಾ ಅಣೆಕಟ್ಟು ಯೋಜನೆಯನ್ನ ಮೂರು ದಶಕಗಳಿಂದ ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ಮಾಡುತ್ತಿರುವುದು ಕಂಡುಬಂದಿದೆ ಎಂದು ಪಿಎಂ ಮೋದಿ ಹೇಳಿದರು.
ಮುಂದುವರೆದ ಪ್ರಧಾನಿ ಮೋದಿ “ನಿಮ್ಮ ಮತವನ್ನ ಕೇಳಲು ಬಂದಾಗ ಕಾಂಗ್ರೆಸ್’ನ್ನ ಒಮ್ಮೆ ಕೇಳಿ, ನೀವು ನರ್ಮದಾ ಅಣೆಕಟ್ಟೆಯನ್ನ ವಿರೋಧಿಸುವವರ ಭುಜಗಳ ಮೇಲೆ ಕೈ ಹಾಕಿ ಪಾದಯಾತ್ರೆ ಮಾಡುತ್ತಿದ್ದೀರಿ. ನರ್ಮದಾ ಅಣೆಕಟ್ಟನ್ನ ನಿರ್ಮಿಸದಿದ್ದರೆ ಏನಾಗುತ್ತಿತ್ತು” ಎಂದು ಎಂದರು.
ಮೇಧಾ ಪಾಟ್ಕರ್ ಅವ್ರು ನವೆಂಬರ್ 17ರಂದು ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಗೆ ಸೇರಿಕೊಂಡರು ಮತ್ತು ರಾಹುಲ್ ಗಾಂಧಿ ಮೇಧಾ ಪಾಟ್ಕರ್ ಭುಜದ ಮೇಲೆ ಕೈಯಿಟ್ಟು ಕಾರ್ಯಕರ್ತರೊಂದಿಗೆ ಮಾತನಾಡುತ್ತಿರುವ ಫೋಟೋಗಳನ್ನ ಪಕ್ಷವು ಟ್ವೀಟ್ ಮಾಡಿದ್ದು, ಬಿಜೆಪಿಯಿಂದ ಟೀಕೆಗೆ ಗುರಿಯಾಗಿದೆ.
ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಉಪಸ್ಥಿತಿಯನ್ನ ಪ್ರಶ್ನಿಸಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, “ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಗುಜರಾತ್ ಮತ್ತು ಗುಜರಾತಿಗಳ ಬಗ್ಗೆ ತಮ್ಮ ದ್ವೇಷವನ್ನು ಪದೇ ಪದೇ ತೋರಿಸಿದ್ದಾರೆ” ಎಂದು ಹೇಳಿದರು. ರಾಹುಲ್ ಗಾಂಧಿ ಗುಜರಾತ್ ಹಿತಾಸಕ್ತಿಗೆ ವಿರುದ್ಧವಾಗಿ ನಿಂತಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿ, “ಮೇಧಾ ಪಾಟ್ಕರ್ ಅವರಿಗೆ ತಮ್ಮ ಯಾತ್ರೆಯಲ್ಲಿ ಕೇಂದ್ರ ಸ್ಥಾನವನ್ನ ನೀಡುವ ಮೂಲಕ, ರಾಹುಲ್ ಗಾಂಧಿ ಅವರು ದಶಕಗಳಿಂದ ಗುಜರಾತಿಗಳಿಗೆ ನೀರು ನಿರಾಕರಿಸಿದ ಅಂಶಗಳೊಂದಿಗೆ ನಿಂತಿದ್ದಾರೆ ಎಂದು ತೋರಿಸಿದ್ದಾರೆ. ಇದನ್ನು ಗುಜರಾತ್ ಸಹಿಸುವುದಿಲ್ಲ’ ಎಂದರು.
“ಗುಜರಾತ್ನ ಮಹತ್ವಾಕಾಂಕ್ಷೆಯ ಸರ್ದಾರ್ ಸರೋವರ್ ಯೋಜನೆಯ ವಿರುದ್ಧದ ಅಭಿಯಾನವನ್ನು ಮುನ್ನಡೆಸಿದ ಮೇಧಾ ಪಾಟ್ಕರ್, ನರ್ಮದಾ ಯೋಜನೆಯ ಪ್ರಗತಿಯನ್ನ ತಡೆಯಲು ಹಣ ತಡೆಯುವುದು ಸೇರಿದಂತೆ ಎಲ್ಲವನ್ನೂ ಮಾಡಿದರು. ಇನ್ನು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಕೊಂಡಿದ್ದು, ಕಾಂಗ್ರೆಸ್ ಯಾವಾಗಲೂ ಗುಜರಾತ್ ವಿರೋಧಿಯಾಗಿದೆ ಮತ್ತು ಅದು ಮುಂದುವರಿಯುತ್ತದೆ” ಎಂದು ಬಿಜೆಪಿಯ ಅಮಿತ್ ಮಾಳವೀಯ ಹೇಳಿದರು.
ಕೋವಿಡ್-19 + ಮಧುಮೇಹ ‘ಹೃದಯ ವೈಫಲ್ಯ’ಕ್ಕೆ ಕಾರಣವಾಗುತ್ತೆ ; ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ
BIGG NEWS: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೊ ಯಾತ್ರೆಯಲ್ಲಿ ಅಮೋಲ್ ಪಾಲೇಕರ್, ಸಂ. ಗೋಖಲೆ ಭಾಗಿ
BREAKING NEWS : ‘ಏರ್ ಇಂಡಿಯಾ ವಿಮಾನ’ದಲ್ಲಿ ತಾಂತ್ರಿಕ ದೋಷ, ತುರ್ತು ಭೂಸ್ಪರ್ಶ