ಬಾಗಲಕೋಟೆ: ಕುಡುಕರ ಕುಟುಂಬಕ್ಕೆ ಮಾಸಾಶನ ಕೊಡಿ, ಇಲ್ಲ ಬಾರ್ ಓಪನ್ ಮಾಡಿ, ಹೀಗೊಂದು ವಿಚಿತ್ರವಾದ ಮನವಿಯನ್ನು ತಹಶೀಲ್ದಾರ್ಗೆ ಗ್ರಾಮಸ್ಥರು ಸಲ್ಲಿಸರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ .
ಜಿಲ್ಲೆ ರೋಣ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನ ಶನಿವಾರ ʻಅಧಿಕಾರಿಗಳ ನಡೆ ಹಳ್ಳಿ ಕಡೆʼ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಈ ವೇಳೇ ಕುರಹಟ್ಟಿ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಎರಡರಿಂದ ಮೂರು ಬಾರ್ ಮಂಜೂರು ಮಾಡಿಕೊಡಿ ಅಂಥ ವಿಚಿತ್ರವಾದ ಮನವಿಯನ್ನು ಸಲ್ಲಿಸಿದರು. ಇದನ್ನು ಕೇಳಿಸಿಕೊಂಡ ತಹಶೀಲ್ದಾರ್ ಕೆಲ ಕಾಲ ಗೊಂದಲ್ಲೆ ಈಡಾದರು ಕೂಡ. ಈದೇ ವೇಳೆ ನಮ್ಮ ಗ್ರಾಮದಲ್ಲಿ ಸುಮಾರು 700 ಜನ ಮದ್ಯ ವ್ಯಸನಿಗಳಿದ್ದು, ಇವರು ಅಕ್ರಮ ಮದ್ಯ ಮಾರಾಟಗಾರರಿಂದ ಮದ್ಯವನ್ನು ಸೇವನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ಈ ನಿಟ್ಟಿನಲ್ಲಿ ಅವರಿಗೆ ಮೂರರಿಂದ ನಾಲ್ಕು ಬಾರ್ ಬೇಕಾಗಿದ್ದು, ನಮಗೆ ನ್ಯಾಯ ಒದಗಿಸಿ ಅಂತ ಹೇಳಿದ್ದಾರೆ. ಇದಲ್ಲದೇ ಕುಡಿತದಿಂದ ಹಲವು ಮಂದಿ ಸಾವನ್ನಪ್ಪಿದ್ದು, ಅವರ ಕುಟುಂಬಗಳಿಗೆ ಪ್ರತಿ ತಿಂಗಳು ಮಾಸಿಕ ಐದು ಸಾವಿರಗಳ ಪಿಂಚಣಿ ನೀಡಬೇಕು ಅಂತ ಮನವಿಯನ್ನು ಸಲ್ಲಿಸಲಾಗಿದೆ.