ನವದೆಹಲಿ : ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಮಾಹಿತಿ ಹೊರಬೀಳುತ್ತಿದೆ. ಸಧ್ಯ ಶ್ರದ್ಧಾಳ ತಂದೆ, ಈ ಹತ್ಯೆಯಲ್ಲಿ ಅಫ್ತಾಬ್ ಮಾತ್ರವಲ್ಲ ಆತನ ಕುಟುಂಬದ ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಶ್ರದ್ಧಾಳ ತಂದೆ, “ತಾನೊಮ್ಮೆ ಮದುವೆಯ ಪ್ರಸ್ತಾಪದೊಂದಿಗೆ ಅಫ್ತಾಬ್ ಮನೆಗೆ ಹೋಗಿದ್ದ. ಆದ್ರೆ, ಅಫ್ತಾಬ್ ಮದುವೆಗೆ ನಿರಾಕರಿಸಿದ್ದ. ಅಷ್ಟೇ ಅಲ್ಲ ಅಫ್ತಾಬ್ ಮನೆಯವರೂ ಈ ಮದುವೆಗೆ ಸಿದ್ಧರಿರಲಿಲ್ಲ. ಶ್ರದ್ಧಾ ಕೊಲೆಯಲ್ಲಿ ಅಫ್ತಾಬ್ ಮತ್ತು ಆತನ ಕುಟುಂಬದವರೂ ಭಾಗಿಯಾಗಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಂದ್ಹಾಗೆ, ಶ್ರದ್ಧಾ ಹತ್ಯೆಯ ಸುದ್ದಿಯ ನಂತ್ರ ಅಫ್ತಾಬ್ ಕುಟುಂಬವೂ ಇನ್ನೂ ನಾಪತ್ತೆಯಾಗಿದೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಅವರ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ಧಮ್, ತಾಕತ್ತು ಇದ್ದರೇ ನ್ಯಾಯಾಂಗ ತನಿಖೆ ಮಾಡಿ: ಸಿಎಂಗೆ ಸವಾಲ್ ಹಾಕಿದ ಡಿಕೆಶಿ
Heart attack: ಹೃದಯಘಾತಕ್ಕೂ 1 ತಿಂಗಳ ಮೊದಲು ಕಾಣಿಸಿಕೊಳ್ಳುವ ಈ 12 ರೋಗಲಕ್ಷಣಗಳ ಬಗ್ಗೆ ಎಚ್ಚರ