ಮಂಡ್ಯ: ಮೆಲುಕೋಟೆ ತಾಲೂಕಿನಲ್ಲಿ ಸಂಪೂರ್ಣ ರಸ್ತೆಗಳು ಹದಗೆಟ್ಟಿವೆ. ಭಾರೀ ಗಾತ್ರದ ವಾಹನಗಳು ಸಂಚರಿಸುತ್ತಿರುವುದರಿಂದ ಮೇಲುಕೋಟೆ ಕ್ಷೇತ್ರದ ಹೆದ್ದಾರಿ ವ್ಯಾಪ್ತಿಯಲ್ಲಿನ ಬಹುತೇಕ ರಸ್ತೆಗಳು ಗುಂಡಿಗಳು ಬಿದ್ದು ಹಾಳಾಗಿವೆ.
BIGG NEWS: ಮತದಾರರ ಪಟ್ಟಿ ಕಳವು ಆರೋಪ:ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!
ಹೀಗಾಗಿ ರಸ್ತೆಗಳು ದುರಸ್ತಿ ಮಾಡುವಂತೆ ಆಗ್ರಹಗಳು ಕೇಳಿಬರುತ್ತಿದೆ. ಆದಷ್ಟು ಬೇಗ ಹೆದ್ದಾರಿಯನ್ನು ದುರಸ್ತಿ ಮಾಡಬೇಕು ಎಂದು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ಗಡುವು ನೀಡಿದ್ದಾರೆ. ಹೆದ್ದಾರಿ ಕೆಲಸ ಮುಗಿದ ಬಳಿಕ ರಸ್ತೆ ದುರಸ್ಥಿ ಮಾಡಿಸಿ ಕೊಡುವುದಾಗಿ ಸಂಸದ ಪ್ರತಾಪ್ ಸಿಂಹ ಅವರು ಮಾತುಕೊಟ್ಟಿದ್ದರು. ಸದ್ಯ ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಬಹುತೇಕ ಅಂತ್ಯಗೊಂಡಿದೆ. ಹೀಗಾಗಿ ಸಂಸದ ಪ್ರತಾಪ್ ಸಿಂಹ ಮಾತು ಉಳಿಸಿಕೊಳ್ಳದೆ ಹೋದರೆ ಪ್ರತಿಭಟನೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.