ಹೈದರಾಬಾದ್ : ಸಿನಿಮಾ ಎಲ್ಲರನ್ನು ಆಕರ್ಷಿಸುತ್ತದೆ. ನಾನು ಸಿನಿಮಾದಲ್ಲಿ ನಟಿಯಾಗಬೇಕು, ನಟನಾಗಬೇಕು., ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು..ಈ ತರಹದ ಆಸೆ ಯಾರಿಗೆ ಇರಲ್ಲ ಹೇಳಿ..ಬಣ್ಣದ ಜಗತ್ತಿನಲ್ಲಿ ಜೀವನ ಸಾಗಿಸಲು ಬಂದು ಮೋಸ ಹೋದ ಜನರ ಅನೇಕ ಉದಾಹರಣೆಗಳಿವೆ.
ಈಗ ತೆಲುಗು ನಟಿ ಸುನೀತಾ ಬೋಯ ಅವರು ವಂಚನೆಗೊಳಗಾಗಿದ್ದಾರೆ ಎಂದು ಖ್ಯಾತ ನಿರ್ಮಾಣ ಸಂಸ್ಥೆಯೊಂದು ಆರೋಪಿಸಿದೆ. ಗೀತಾ ಆರ್ಟ್ಸ್ ಹೈದರಾಬಾದ್ ಕಚೇರಿಯ ಮುಂದೆ ಸುನೀತಾ ಬೋಯ ಅವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ನಿರ್ಮಾಪಕ ಬನ್ನಿ ವಾಸು ಅವರು ತಮಗೆ ಮೋಸ ಮಾಡಿದ್ದಾರೆ ಎಂದು ಸುನೀತಾ ಆರೋಪಿಸಿದ್ದಾರೆ. ಸುನೀತಾ ಗುರುವಾರ ರಾತ್ರಿ (ನವೆಂಬರ್ 17) ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಕಚೇರಿ ಮುಂದೆ ಬೆತ್ತಲೆಯಾಗಿ ಪ್ರತಿಭಟಿಸಿದರು.
ಸುನೀತಾ ಅನೇಕ ಚಲನಚಿತ್ರಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಬನ್ನಿ ವಾಸು ನಿರ್ಮಿಸಿದ ಕೆಲವು ಚಿತ್ರಗಳಲ್ಲಿ ಸುನೀತಾ ನಟಿಸಿದ್ದಾರೆ. ತನಗೆ ಸರಿಯಾಗಿ ಸಂಬಳ ನೀಡಿಲ್ಲ, ನಾನು ಮಾನಸಿಕವಾಗಿ ಕುಗ್ಗಿದ್ದೇನೆಎಂದು ಆರೋಪಿಸಿದ್ದಾರೆ. ತನ್ನ ಮಾನಸಿಕ ಅವನತಿಗೆ ಬನ್ನಿ ವಾಸು ಕಾರಣ ಎಂದು ನಟಿ ದೂರಿದರು. ಆದಾಗ್ಯೂ, ಯಾರಿಗೂ ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ, ಅವರು ಬೆತ್ತಲೆಯಾಗಿ ಪ್ರತಿಭಟಿಸಿದರು.
ಮೀಟೂ ಅಭಿಯಾನ ಪ್ರಾರಂಭವಾದಾಗ, ನಟಿ ಶ್ರೀ ರೆಡ್ಡಿ ಕೂಡ ಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ಕೋಲಾಹಲವನ್ನು ಸೃಷ್ಟಿಸಿದರು. ಅನೇಕ ಜನರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದರು, ಇದೀಗ ಸುನೀತಾ ಬೋಯ ಅವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
Weight Loss Mistakes :ದೇಹದ ತೂಕ ಇಳಿಸುವ ಭರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಸಮಸ್ಯೆ ಎದುರಿಸೋದು ಗ್ಯಾರೆಂಟಿ
YouTube ಮಹತ್ವದ ಪ್ರಕಟಣೆ ; ಹೊಸ ವೈಶಿಷ್ಟ್ಯ ಬಿಡುಗಡೆ, ಈಗ ‘Shorts’ನಿಂದ್ಲೂ ಹಣ ಸಂಪಾಸ್ಬೋದು