ನವದೆಹಲಿ: ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನ ನವದೆಹಲಿಯ ಜವಾಹರ್ ಲಾಲ್ ನೆಹರೂ ಭವನದಲ್ಲಿ ಇಂದು ಬಂಧಿಸಲಾಗಿದೆ.
ಬಂಧಿತ ಚಾಲಕ, ಪೂನಂ ಶರ್ಮಾ ಅಥವಾ ಪೂಜಾ ಎಂಬ ಮಹಿಳೆಯಂತೆ ನಟಿಸುತ್ತಿದ್ದ ಪಾಕಿಸ್ತಾನಿ ವ್ಯಕ್ತಿಗೆ ಹಣಕ್ಕಾಗಿ ಮಾಹಿತಿ ಮತ್ತು ದಾಖಲೆಗಳನ್ನ ವರ್ಗಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಇನ್ನು ಚಾಲಕನನ್ನ ಪಾಕಿಸ್ತಾನ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರ ಅಪರಾಧ ವಿಭಾಗದ ಮೂಲಗಳು ತಿಳಿಸಿವೆ.
Delhi Police with the help of security agencies arrested a driver working in Ministry of External Affairs (MEA) for passing confidential and sensitive information to Pakistan. The driver was honey-trapped by Pakistan ISI: Sources pic.twitter.com/VuVAwltppO
— ANI (@ANI) November 18, 2022
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಉದ್ಯೋಗಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ.? ಎಂದು ಕಂಡುಹಿಡಿಯಲು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಈಗ ತನಿಖೆಯನ್ನ ಪ್ರಾರಂಭಿಸಿವೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಆಗಾಗ್ಗೆ ಹನಿಟ್ರ್ಯಾಪ್ಗಳಿಗೆ ಬಲಿಯಾಗುತ್ತಾರೆ. ಆದರೆ, ಪಾಕಿಸ್ತಾನದ ಐಎಸ್ಐ ಚಾಲಕನನ್ನ ಗುರಿಯಾಗಿಸಿಕೊಂಡಿರುವುದು ಬಹುಶಃ ಇದೇ ಮೊದಲು. ಆರೋಪಿಯಿಂದ ಕೆಲವು ಹುಡುಗಿಯರ ಚಿತ್ರಗಳು ಮತ್ತು ವೀಡಿಯೊಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯನ್ನ ಇನ್ನೂ ನಿರೀಕ್ಷಿಸಲಾಗುತ್ತಿದೆ.
BIGG NEWS : ಕೊಪ್ಪಳದ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ಪಲಾವ್ ಸೇವಿಸಿ, 20 ವಿದ್ಯಾರ್ಥಿನಿಯರಿಗೆ ವಾಂತಿಭೇದಿ
BIG BREAKING NEWS: ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಪ್ರಕರಣ: ಚಿಲುಮೆ ಸಂಸ್ಥೆ ಮೇಲೆ ಪೊಲೀಸರ ದಾಳಿ