ಬೆಂಗಳೂರು : ವೋಟರ್ ಐಡಿ ಅಕ್ರಮ ಪ್ರಕರಣವನ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಕೆಶಿ ಇದೊಂದು ಗಂಭೀರ ಅಪರಾಧವಾಗಿದೆ. ನಾಳೆ ಮಧ್ಯಾಹ್ನ ಚುನಾವಣೆ ಆಯೋಗ ಭೇಟಿಗೆ ನಾವು ಸಮಯ ಕೇಳಿದ್ದೇವೆ. ನಾಳೆ ನಾನು, ಸಿದ್ದರಾಮಯ್ಯ ಎಲ್ಲರೂ ಆಯೋಗದ ಆಯುಕ್ತರನ್ನ ಭೇಟಿಯಾಗಲಿದ್ದೆವೆ ಎಂದು ಹೇಳಿದ್ದಾರೆ.
ನಾವೇನಾದ್ರು ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟು ದುರ್ಬಳಕೆ ಮಾಡಿದ್ರೆ ಕೂಡಲೇ ಎಲ್ಲರನ್ನು ಬಂಧನ ಮಾಡಲಿ. ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಯಾವ ಮಂತ್ರಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ ಎಂದಿದ್ದಾರೆ. ಚುನಾವಣಾ ಆಯೋಗ ಕೂಡಾ ಇದರಲ್ಲಿ ಆರೋಪಿ. ಯಾಕೆ ಇದುವರೆಗೂ ಚುನಾವಣೆ ಆಯೋಗ ಕ್ರಮ ತೆಗೆದುಗೊಂಡಿಲ್ಲ? ನಾಳೆ ಮಧ್ಯಾಹ್ನ ಅವರನ್ನ ಭೇಟಿಯಾಗಿ ಮಾತನಾಡಲಿದ್ದೇವೆ ಎಂದು ಹೇಳಿದರು.
ವೋಟರ್ ಐಡಿ ಅಕ್ರಮ ಆರೋಪ ; ಯಾವುದೇ ತನಿಖೆಗೂ ಸಿದ್ದ
ವೋಟರ್ ಐಡಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.ಈ ಕುರಿತು ಮಾತನಾಡಿದ ಡಿಕೆಶಿ ನೀವು ಯಾವ ಕ್ರಮ ಬೇಕಾದರೂ ಜರುಗಿಸಿ, ಅದನ್ನು ಎದುರಿಸಲು ನಾವು ಸಿದ್ದವಿದ್ದೇವೆ, ಮಾನನಷ್ಟೆ ಮೊಕದ್ದಮೆ ಹಾಕಿದರೂ ನಾವು ಎದುರಿಸುತ್ತೇವೆ ಎಂದಿದ್ದಾರೆ.
ಇದರ ಬಗ್ಗೆ ತನಿಖೆ ಆಗಲಿ, ಇದರ ಬಗ್ಗೆ ಚರ್ಚೆ ಆಗಲಿ, ಅವಮಾನ ಆಗಿದ್ದರೆ ಮಾನನಷ್ಟ ಕೇಸ್ ಹಾಕಲಿ ಎಂದು ಅಶ್ವಥ್ ನಾರಾಯಣ್ ಗೆ ತಿರುಗೇಟು ನೀಡಿದ್ದಾರೆ. ಹೊಂಬಾಳೆನೋ, ಇನ್ನೊಬ್ಬನೋ. ತಪ್ಪು ಮಾಡಿದ ಮೇಲೆ ತಪ್ಪೇ ..ತಪ್ಪಿತಸ್ಥರು ಯಾರೇ ಆದರೂ ಕ್ರಮ ಕೈಗೊಳ್ಳಿ ಎಂದು ಸವಾಲ್ ಹಾಕಿದ್ದಾರೆ.