ಬೆಂಗಳೂರು: ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಬಿಬಿಎಂಪಿಯಿಂದ ಖಾಸಗಿ ಸಂಸ್ಥೆಗೆ ನೀಡಿದಂತ ಗುತ್ತಿಗೆ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮದ ಆರೋಪವನ್ನು ವಿಪಕ್ಷ ನಾಯಕರು ಮಾಡಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ಬಿಬಿಎಂಪಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದಂತ ಮರುದಿನವೇ ಅನುಮತಿ ಪತ್ರ ನೀಡಿದೆ ಎನ್ನಲಾಗುತ್ತಿದೆ.
ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬಾಂಗ್ಲಾದಲ್ಲೊಂದು ಘಟನೆ: ಪ್ರೇಯಸಿಯನ್ನು ತುಂಡರಿಸಿ ಚರಂಡಿಗೆ ಎಸೆದ ಪಾಪಿ
ಅಕ್ಟೋಬರ್ 16, 19ರಂದು ಮತದಾನದ ಜಾಗೃತಿ ಮೂಡಿಸೋ ಸಂಬಂಧ ಗುತ್ತಿಗೆ ನೀಡುವಂತೆ ಚಿಲುಮೆ ಸಂಸ್ಥೆಯಿಂದ ಬಿಬಿಎಂಪಿಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಹೀಗೆ ಅರ್ಜಿ ಸಲ್ಲಿಸಿದಂತ ಅರ್ಜಿಯನ್ನು ಬಿಬಿಎಂಪಿಯಿಂದ ಅಕ್ಟೋಬರ್ 20ರಂದು ಪರಿಶೀಲಿಸಿ, ಚಿಲುಮೆ ಸಂಸ್ಥೆಗೆ ಒಂದೇ ದಿನದಲ್ಲಿ ಅನುಮತಿ ಪತ್ರವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಬಿಎಂಪಿಯ ಅಧಿಕಾರಿಗಳ ನಡೆಯೂ ಅನುಮಾನಕ್ಕೆ ಕಾರಣವಾಗಿದೆ.
ಅಂದಹಾಗೇ ಬಿಬಿಎಂಪಿಯಿಂದ ಕಡತ ವಿಲೇವಾರಿ ಆಗಲು ಕನಿಷ್ಠ ಒಂದು ವಾರ ಕಾಲ ಬೇಕಾಗುತ್ತದೆ. ಹೀಗಿದ್ದೂ ಚಿಲುಮೆ ಸಂಸ್ಥೆಯಿಂದ ಮತದಾನ ಜಾಗೃತಿ ಮೂಡಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದಂತ ಮರು ದಿನವೇ ಅನುಮತಿ ಪತ್ರ ನೀಡಿದೆ ಎನ್ನಲಾಗಿದೆ. ಹೀಗಾಗಿ ಅನೇಕ ಅನುಮಾನಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಮತ್ತೊಂದು ತಿರುವನ್ನು ಪಡೆದುಕೊಂಡಿದೆ.