ಪುಣೆ: ಉತ್ತರ ಪ್ರದೇಶ ಮೂಲದ 17 ವರ್ಷದ ಬಾಲಕಿಯೊಬ್ಬಳು ತನ್ನ ತಂದೆ, ಚಿಕ್ಕಪ್ಪನಿಂದ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರಕ್ಕೊಳಗಾಗಿದ್ದು, ಮತ್ತು ತನ್ನ ಅಜ್ಜನಿಂದ ಕಿರುಕುಳ ಅನುಭವಿಸಿರುವ ಬಗ್ಗೆ ಪುಣೆ ಪೊಲೀಸರಿಗೆ ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ.
ಬಾಲಕಿ ತಾನು ಪ್ರಸ್ತುತ ಓದುತ್ತಿರುವ ಪುಣೆಯ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಕುರಿತು ವಿಶಾಖಾ ಸಮಿತಿಯ ಸದಸ್ಯರ ಮುಂದೆ ತನಗಾದ ನರಳಾಟವನ್ನು ವಿವರಿಸಿದ್ದಾಳೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬುಧವಾರ ಪುಣೆ ನಗರದ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತೆ ತನ್ನ ದೂರಿನಲ್ಲಿ, ʻ2016 ಮತ್ತು 2018 ರ ನಡುವೆ ಉತ್ತರ ಪ್ರದೇಶದ ತನ್ನ ತವರು ಮನೆಯಲ್ಲಿದ್ದಾಗ ತನ್ನ ಚಿಕ್ಕಪ್ಪ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಮತ್ತು ಅಜ್ಜ ಕಿರುಕುಳ ನೀಡಿದ್ದಾನೆ. 2018 ರಲ್ಲಿ ಪುಣೆಗೆ ಬಂದ ನಂತರ, ಬಾಲಕಿ ತನ್ನ ತಂದೆಗೆ ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಚೀಟಿಯಲ್ಲಿ ಬರೆದು ತಿಳಿಸಿದಳು. ಆದರೆ, ಕಾಮುಕರ ವಿರುದ್ಧ ಕಿಡಿಕಾರದ ತಂದೆ ತನ್ನ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಹಲವಾರು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆʼ ಎಂದು ತಿಳಿಸಿದ್ದಾಳೆ.
ನಾವು ಬಾಲಕಿಯ ತಂದೆ, ಅಜ್ಜ ಮತ್ತು ಚಿಕ್ಕಪ್ಪನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
BIG NEWS : ವಿಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು
SHOCKING NEWS: ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿದ ವೈದ್ಯರು: ಮಹಿಳೆಯರಿಗೆ ನರಕಯಾತನೆ
BIGG NEWS : ಟಿಕೆಟ್ ವಿಚಾರಕ್ಕೆ ಕಿರಿಕ್, ರೈಲಿನಿಂದ ಹೊರ ತಳ್ಳಿದ ಟಿಟಿಇ : ಕಾಲು ಕಳೆದುಕೊಂಡ ಸೇನಾ ಸಿಬ್ಬಂದಿ
BIG NEWS : ವಿಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು