ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಾಗಿದ್ದಂತ ಗ್ರೂಪ್-ಸಿ, ಡಿ ವೃಂದದ ನೌಕರರ ವರ್ಗಾವಣೆಗೆ ( Group-C, D Category Employees Transfer ) ಇಂದು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಗ್ರೂಪ್-ಸಿ, ಡಿ ವೃಂದದ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಚಿವ ಡಾ.ಕೆ.ಸುಧಾಕರ್ ಅವರು, ರಾಜ್ಯದಲ್ಲಿ ಹೊಸ ಶ್ರೀಗಂಧ ನೀತಿ-2022ಗೆ ಸಮ್ಮತಿಸಲಾಗಿದೆ. ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ವಿಶ್ವಮಟ್ಟದಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಸರಳೀಕರಣ ಮಾಡಿದ್ದೇವೆ. ಓಪನ್ ಮಾರುಕಟ್ಟೆಗೆ ಅವಕಾಶ ನೀಡಿದ್ದೇವೆ. ರೈತರಿಗೆ ಸಂಪೂರ್ಣ ಮಾರ್ಗದರ್ಶನ ನೀಡಲಿದ್ದೇವೆ. ಶ್ರೀಗಂಧ ಬೆಳೆಯಲು ರಕ್ಷಣೆಯೂ ಸಿಗಲಿದೆ ಎಂದು ತಿಳಿಸಿದರು.
ನಮಗೆ ಶ್ರೀಗಂಧದ ಲಭ್ಯತೆ ಕೊರತೆಯಿದೆ. ನಮ್ಮ ಸರ್ಕಾರಿ ಸಂಸ್ಥೆಗೆ ಶ್ರೀಗಂಧ ಬೇಕಿದೆ. ಖಾಸಗಿ ಸಂಸ್ಥೆಗೂ ಶ್ರೀಗಂಧ ಬೇಕಿದೆ. ಮಾರಾಟಕ್ಕೆ ಕೆಲವು ನಿರ್ಬಂದವಿತ್ತು. ಈಗ ಆ ನಿರ್ಭಂದಗಳನ್ನ ತೆಗೆಯಲಾಗಿದೆ. ಹಾಗಾಗಿ ಈ ನೀತಿಯನ್ನ ತರಲಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆಯುಷ್ಮಾನ್ ಯೋಜನೆಯಡಿ ತೀರ್ವ ನಿಗಾಘಟಕ ಸ್ಥಾಪಿಸಲಾಗುತ್ತದೆ. ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲಾಗುತ್ತದೆ. 56 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.
ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಪಕರಣ, ರೋಗ ಪತ್ತೆ ಕಿಟ್ ಖರೀದಿಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 154 ಕೋಟಿ ವೆಚ್ಚದಲ್ಲಿ ಖರೀದಿಗೆ ಸಮ್ಮತಿಸಲಾಗಿದೆ ಎಂದರು.
ಎನ್ ಹೆಚ್ ಎಂ ಫಂಡ್ ನಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲಾಗುತ್ತದೆ. ಏಳು ಆಸ್ಪತ್ರೆಗಳಿಗೆ 158 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ತಾಯಿ ಮತ್ತು ಮಗು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗುತ್ತದೆ. ತರಿಕೆರೆಯಲ್ಲಿ 100 ಹಾಸಿಗೆ ತಾಯಿ ಮಗು ಆಸ್ಪತ್ರೆ ನಿರ್ಮಿಸಲಾಗುತ್ತದೆ. ಲಿಂಗಸುಗೂರಿನಲ್ಲಿ 50 ಹಾಸಿಗೆ ತಾಯಿಮಗು ಆಸ್ಪತ್ರೆ ನಿರ್ಮಿಸಲಾಗುವುದು. ಹರಿಹರದಲ್ಲಿ 50 ಹಾಸಿಗೆ ತಾಯಿ ಮಗು ಆಸ್ಪತ್ರೆ, ಗೋಕಾಕ್ ನಲ್ಲಿ 200 ಬೆಡ್ ತಾಯಿ ಮಗು ಆಸ್ಪತ್ರೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಧಾರವಾಡ- ಹಳಿಯಾಳ ರಸ್ತೆ ಕೆಳಸೇತುವೆಗೆ ಅನುಮತಿ ನೀಡಲಾಗಿದೆ. ಸುಮಾರು 41 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ತುಮಕೂರು ನರ್ಸಿಂಗ್ ಕಾಲೇಜುನಿರ್ಮಾಣಕ್ಕಾಗಿ 20 ಕೋಟಿ ವೆಚ್ಚದ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಟ್ರಾಮಾಕೇರ್ ಸೆಂಟರ್ ಗೆ ಸಂಪುಟಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು.
ಶ್ರೀಕಂಠೇಶ್ವರ ದೇಗುಲ ವಿಐಪಿ ಕೊಠಡಿ ನಿರ್ಮಾಣಕ್ಕೆ 16 ಕೋಟಿ, ಇಎಸ್ ಐ ಆಸ್ಪತ್ರೆ ಉಪಕರಣ ಖರೀದಿಗೆ ಸುಮಾರು 44 ಕೋಟಿ ವೆಚ್ಷಕ್ಕೆ ಅನುಮೋದನೆ ನೀಡಲಾಗಿದೆ. ಬಳ್ಳಾರಿ ತಾಲೂಕಿನ 6 ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಸೌಲಭ್ಯ ಕಲ್ಪಿಸೋ ನಿಟ್ಟಿನಲ್ಲಿ 11 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಅಂಜನಾಪುರದಲ್ಲಿ ಸಾರಿಗೆ ಕಟ್ಟಡ ನಿರ್ಮಾಣಕ್ಕಾಗಿ 25 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಡಿಸೆಂಬರ್ 19ರಿಂದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 30 ರವರೆಗೆ ಅಧಿವೇಶನ ನಡೆಯಲಿದೆ ಎಂದು ಹೇಳಿದರು.
ಶಿವಮೊಗ್ಗ: ಶಿಕಾರಿಪುರ ತಾಲೂಕು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ರಾಮನಗರ ರಾಜೀವ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕಾಗಿ 600 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಗೌರಿಬಿದನೂರಿನಲ್ಲಿ ನೂತನ ನ್ಯಾಯಾಲಯ ಕಟ್ಟಡವನ್ನು 12 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ನಮ್ಮನೆ ಸುಮ್ಮನೆ ಟ್ರಸ್ಟ್ ಗೆ ಗಂಗೊಂಡನಹಳ್ಳಿಯಲ್ಲಿ ಸರ್ವೆ ನಂಬರ್ 18ರಲ್ಲಿ 15 ಗುಂಟೆ ಭೂಮಿ ನೀಡಲು ಒಪ್ಪಿಗೆಯನ್ನು ನೀಡಲಾಗಿದೆ.
ರಾಜ್ಯದ ಗ್ರೂಪ್ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ವರ್ಗಾವಣೆ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ. 7 ವರ್ಷ ಸೇವೆ ಸಲ್ಲಿಸಿದವರಿಗೆ ಅನ್ವಯವಾಗಲಿದೆ. ಪತಿ, ಪತ್ನಿ ಇದ್ದರೆ ಅವರಿಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲಾಗುತ್ತಿದೆ. ಇಂದು ಈ ನಿಯಮ ತಿದ್ದುಪಡಿಗೂ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ ಎಂದರು.