ಮಂಡ್ಯ: ನಾನು ಮಂಡ್ಯ ( Mandya ) ಬಿಡುತ್ತೇನೆ ಎಂಬುದಾಗಿ ಕೆಲವರು ಕನಸು ಕಾಣುತ್ತಿದ್ದಾರೆ. ಆದ್ರೇ ನಾನು ರಾಜಕೀಯವನ್ನು ಬಿಟ್ಟರೂ, ಮಂಡ್ಯವನ್ನು ಮಾತ್ರ ಬಿಡುವುದಿಲ್ಲ ಎಂಬುದಾಗಿ ಸಂಸದೆ ಸುಮಲತಾ ಅಂಬರೀಶ್ ( MP Sumalatha Ambareesh ) ಹೇಳಿದ್ದಾರೆ.
‘ಮೈಸೂರು ಗುಂಬಜ್’ ಹೇಳಿಕೆ ವಿಚಾರಕ್ಕೆ ನಾನು ಬದ್ದ : ಸಂಸದ ಪ್ರತಾಪ್ ಸಿಂಹ |Prathap Simha
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿಧಾನಸಭಾ ಚುನಾವಣೆಗೆ ನಾನೇನು ನಿಂತುಕೊಳ್ಳುವುದಿಲ್ಲ. ಯಾರಿಗೆ ಬೆಂಬಲ ನೀಡುವ ಬಗ್ಗೆ ಯಾವುದೇ ನಿರ್ಧಾರ ಸದ್ಯಕ್ಕೆ ಪ್ರಕಟಿಸುವುದಿಲ್ಲ. ಇದುವರೆಗೆ ನಾನು ಯಾರಿಗೂ ಬೆಂಬಲ ನೀಡಿಲ್ಲ ಎಂದರು.
BREAKING NEWS : ಎಎಪಿ ನಾಯಕ ‘ಸತ್ಯೇಂದ್ರ ಜೈನ್’ಗೆ ಬಿಗ್ ಶಾಕ್ ; ಜಾಮೀನು ಅರ್ಜಿ ಮತ್ತೆ ತಿರಸ್ಕೃತ
ಮಂಡ್ಯದಲ್ಲಿನ ಸಮಸ್ಯೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿದ್ದೇನೆ. ರಸ್ತೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತಂತೆ ಸುಧೀರ್ಘ ಪತ್ರವನ್ನು ಬರೆದಿದ್ದೇನೆ. ಮಾಡುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಬೇಕು ಅಷ್ಟೇ ಎಂದು ಹೇಳಿದರು.
ನಾನು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಎಲ್ಲಾ ರೀತಿಯ ಯೋಜನೆ, ಚರ್ಚೆಗಳನ್ನು ಮಾಡುತ್ತಿದ್ದೇನೆ. ಅವುಗಳನ್ನು ಕಾರ್ಯರೂಪಕ್ಕೆ ತರುವುದಕ್ಕೂ ಪ್ರಯತ್ನ ಪಡುತ್ತಿದ್ದೇನೆ. ಕೆಲವರು ನಾನು ಮಂಡ್ಯ ಬಿಡುತ್ತೇನೆ ಎಂಬುದಾಗಿ ಕನಸು ಕಾಣುತ್ತಿದ್ದಾರೆ. ಆದ್ರೇ ನಾನು ರಾಜಕೀಯವನ್ನು ಬಿಟ್ಟರೂ ಸರಿಯೇ, ಮಂಡ್ಯವನ್ನು ಮಾತ್ರ ಬಿಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.