ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ನಾಯಕ ಅಬು ತಾಹೆರ್ ಖಾನ್ ಅವರ ಕಾರಿಗೆ ಡಿಕ್ಕಿ ಹೊಡೆದು 6 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಮುರ್ಷಿದಾಬಾದ್ನ ನೌಡಾದಲ್ಲಿ ನಡೆದಿದೆ.
ಮಗು ರಸ್ತೆಗೆ ಅಡ್ಡಲಾಗಿ ಓಡುತ್ತಿತ್ತು. ಇದನ್ನು ಕಂಡ ಕಾರು ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಆದ್ರೂ ಮಗು ಕಾರಿಗೆ ಸಿಲುಕಿತು. ಖಾನ್ ತಕ್ಷಣವೇ ತಮ್ಮ ಕಾರಿನಲ್ಲಿ ಮಗುವನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಗು ಸಾವನ್ನಪ್ಪಿತು.
ಮಗು ರಸ್ತೆಗೆ ಅಡ್ಡಲಾಗಿ ಓಡುತ್ತಿತ್ತು. ಇದನ್ನು ಮಗುವಿನ ತಾಯಿ ಗಮನಿಸಲಿಲ್ಲ. ಕೆಲವೇ ಕ್ಷಣಗಳಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಟಿಎಂಸಿ ನಾಯಕ ಹೇಳಿದ್ದಾರೆ.
ಮುರ್ಷಿದಾಬಾದ್ ಪೊಲೀಸ್ ಅಧೀಕ್ಷಕ ಕೆ ಶಬರಿ ರಾಜ್ಕುಮಾರ್ ಮಾತನಾಡಿ, “ಈ ಘಟನೆ ಬುಧವಾರ ಮಧ್ಯಾಹ್ನ 2 ರಿಂದ 2.30 ರ ನಡುವೆ ಸಂಭವಿಸಿದೆ. ದುರದೃಷ್ಟವಶಾತ್ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ವಾಹನ ಚಾಲಕನನ್ನು ಬಂಧಿಸಲಾಗಿದೆ ಮತ್ತು ಎಸ್ಯುವಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, “ಮುರ್ಷಿದಾಬಾದ್ನಲ್ಲಿ ಟಿಎಂಸಿ ಸಂಸದ ಅಬು ತಾಹೆರ್ ಕಾರಿಗೆ ಡಿಕ್ಕಿ ಹೊಡೆದು ಮಗು ಪ್ರಾಣ ಕಳೆದುಕೊಂಡಿದೆ. ಈ ಬಗ್ಗೆ ತನಿಖೆಯಾಗಬೇಕು” ಎಂದು ಬಂಗಾಳ ಬಿಜೆಪಿ ಟ್ವೀಟ್ ಮಾಡಿದೆ.
BIG NEWS: ಭಾರತದಲ್ಲಿ ಇನ್ಮುಂದೆ ಎಲ್ಲಾ ಸ್ಮಾರ್ಟ್ ಫೋನ್ಗಳಿಗೂ ಇನ್ಮುಂದೆ ಏಕರೂಪದ ಚಾರ್ಜಿಂಗ್ ಪೋರ್ಟ್