ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮಾರ್ವಾಹ್ ಪ್ರದೇಶದಲ್ಲಿ ಆಳವಾದ ಕಂದಕಕ್ಕೆ ಟಾಟಾ ಸುಮೋವೊಂದು ಬಿದ್ದಿದ್ದು, ಮಹಿಳೆಯರು ಸೇರಿ 8 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
ನಿನ್ನೆ ಸಂಜೆ 6 ಗಂಟೆಗೆ ಅಲಸ್ಯಾರ್ ರಸ್ತೆಯಲ್ಲಿ ಮಾರ್ವಾಹ್ ಪ್ರದೇಶದಲ್ಲಿ ಆಳವಾದ ಕಮರಿಗೆ ಟಾಟಾ ಸುಮೋವೊಂದು ಬಿದ್ದಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಏಳು ಮೃತರನ್ನು ಗುರುತಿಸಲಾಗಿದ್ದು, ಮಹಿಳೆಯೊಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಮೃತರನ್ನು ಚಾಲಕ ಉಮರ್ ಗನಿ, ಮೊಹಮ್ಮದ್ ಅಮೀನ್, ಮೊಹಮ್ಮದ್ ಇರ್ಫಾನ್, ಅಫಕ್ ಅಹ್ಮದ್, ಸಫೂರ ಬಾನೋ, ಮುಜಾಮಿಲಾ ಬಾನೋ ಮತ್ತು ಆಸಿಯಾ ಬಾನೋ ಎಂದು ಗುರುತಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
BIG NEWS: ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ʻ24X7 ಸಹಾಯವಾಣಿʼ ಆರಂಭ, ಹಗಲು-ರಾತ್ರಿ ಸೇವೆ: ಸಚಿವ ಸುಧಾಕರ್
BIG NEWS: ಇಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್ | POWER CUT IN BANGLORE
Rain In Karnataka: ಇಂದು ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
BIG NEWS: ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ʻ24X7 ಸಹಾಯವಾಣಿʼ ಆರಂಭ, ಹಗಲು-ರಾತ್ರಿ ಸೇವೆ: ಸಚಿವ ಸುಧಾಕರ್