ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ( Sandalwood ) ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿ, ಹೆಸರು ಗಳಿಸಿರುವಂತ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರ ಸಾಹಿತಿ ಎಸ್ ನಾರಾಯಣ್ ( S Narayan ), ಈಗ ಸಿನಿರಂಗದಿಂದ ರಾಜಕೀಯ ರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಹೌದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಾಹಿತಿ ಎಸ್ ನಾರಾಯಣ್ ( S Narayan ) ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಎಸ್. ನಾರಾಯಣ್ ಟಿಕೆಟ್ಗಾಗಿ ಎರಡು ಲಕ್ಷ ರೂಪಾಯಿ ಡಿಡಿ ತುಂಬಿ ಅರ್ಜಿ ಸಲ್ಲಿದರು.
ಎಸ್ ನಾರಾಯಣ್ ಸ್ಯಾಂಡಲ್ ವುಡ್ ನಲ್ಲಿ ವಿಶಿಷ್ಟ ಚಿತ್ರಗಳ ಮೂಲಕ ಹೆಸರು ಮಾಡಿದ್ದರು. . ಶಬ್ದವೇದಿ, ವೀರಪ್ಪನಾಯಕ, ಚೈತ್ರದ ಪ್ರೇಮಾಂಜಲಿ, ಚಂದ್ರಚಕೋರಿ ಸೇರಿದಂತೆ ವಿವಿಧ ಚಿತ್ರಗಳ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ್ದರು. ಅಲ್ಲದೇ ಹಾಸ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಟಿಸಿ ಎಲ್ಲರ ಗಮನ ಸೆಳೆದಿದ್ದರು.
ಕಬ್ಬಿಗೆ ಸೂಕ್ತ ಬೆಲೆ ಆಗ್ರಹಿಸಿ ರೈತರ ಪ್ರತಿಭಟನೆ : ನಾಳೆಯೂ ಮುಧೋಳ ಬಂದ್ ಮುಂದುವರಿಕೆ