ಬೆಂಗಳೂರು : ಬಿಜೆಪಿಯ ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ.
ಎಚ್. ಡಿ. ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಬಿಜೆಪಿ ನಾಯಕರು ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಇಬ್ಬರ ಭೇಟಿ ಹಲವು ಚರ್ಚೆಗೆ ಕಾರಣವಾಗಿದೆ.
ಆದರೆ ಈ ಕುರಿತು ಸೊಗಡು ಶಿವಣ್ಣ ಫೇಸ್ಬುಕ್ ಪೋಸ್ಟ್ ಹಾಕಿ ಭೇಟಿಯ ಎಲ್ಲಾ ಅಂತೆ ಕಂತೆಗೆ ತೆರೆ ಎಳೆದಿದ್ದಾರೆ. ದೇವೇಗೌಡರ ಉಭಯ ಕುಶಲೋಪರಿ ವಿಚಾರಿಸಿ, ಸಚಿವರಾದ ಜೆ. ಸಿ. ಮಾಧುಸ್ವಾಮಿ ಮಗಳ ಮದುವೆಯ ಆಮಂತ್ರವನ್ನು ನೀಡಿ ಆಹ್ವಾನಿಸಲಾಯಿತು ಎಂದು ಸೊಗಡು ಶಿವಣ್ಣ ಪೋಸ್ಟ್ ಹಾಕಿದ್ದಾರೆ.
‘ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಇತ್ತು’ : ಯು.ಟಿ ಖಾದರ್ |U.T Khadar
BREAKING NEWS : ಓಲಾ, ಊಬರ್ ಆಟೋ ದರ ನಿಗದಿ ವಿಚಾರ : ನ.21 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್