ಬೆಂಗಳೂರು : ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬುಧವಾರ ತನ್ನ ನಿಲುವು ತಿಳಿಸಬೇಕಾಗಿದ್ದ ಸರ್ಕಾರ ಇನ್ನಷ್ಟು ಕಾಲಾವಕಾಶ ಕೋರಿದೆ.
ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆ ಹೈಕೋರ್ಟ್ ವಿಚಾರಣೆಯನ್ನು ನ.21 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಇಂದು ಸರ್ಕಾರ ಯಾವುದೇ ಆಕ್ಷೇಪಣೆ ಸಲ್ಲಿಸದ ಸರ್ಕಾರ ಇನ್ನಷ್ಟು ಕಾಲಾವಕಾಶ ಕೋರಿದೆ.
ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರಕ್ಕೆ ಇನ್ನೂ ಕೂಡ ಅಂತಿಮ ಹಂತ ತಲುಪಿಲ್ಲ, ಇತ್ತೀಚೆಗೆ ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರಿಗೆ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಆಟೋ ಚಾಲಕರ ಸಂಘದವರು ಹಾಗೂ ಓಲಾ, ಊಬರ್, ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಯ್ಯ ಸಮಗ್ರ ವರದಿ ಸಿದ್ದಪಡಿಸಿ ಹೈಕೋರ್ಟ್ ಗೆ ಸಲ್ಲಿಸಲಾಗುತ್ತದೆ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ನಿರ್ಧಾರ ತಿಳಿಸುವುದಿಲ್ಲ ಎಂದಿದ್ದರು. ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 16ಕ್ಕೆ ಮುಂದೂಡಿತ್ತು . ಕರ್ನಾಟಕ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿತ್ತು.