ಬೆಂಗಳೂರು: ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆಗೊಂಡಿದ್ದಂತ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ-2022ರನ್ನ ( Teachers’ Transfer Amendment Act, 2022 ) ಅಧಿಕೃತವಾಗಿ ಇಂದು ವಿಶೇಷ ರಾಜ್ಯ ಪತ್ರದ ಮೂಲಕ ಶಿಕ್ಷಣ ಇಲಾಖೆ ( Education Department ) ಪ್ರಕಟಿಸಿದೆ. ಈ ಕರಡು ನಿಯಮಾವಳಿಗೆ ಆಕ್ಷೇಪಣೆ ಸಲ್ಲಿಸಿದ ಬಳಿಕ, ಶಿಕ್ಷಕರ ವರ್ಗಾವಣೆಗೆ ( Teacher Transfer ) ಅಂತಿಮ ಅಧಿಸೂಚನೆಯನ್ನು, ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
BIG BREAKING NEWS: 108 ಆಂಬುಲೆನ್ಸ್ ಸಿಬ್ಬಂದಿಗಳ ಧರಣಿ ಎಚ್ಚರಿಕೆ ಹೆದರಿದ ಜಿವಿಕೆ: 2 ತಿಂಗಳ ಬಾಕಿ ವೇತನ ಬಿಡುಗಡೆ
ಶಿಕ್ಷಣ ಇಲಾಖೆಯಿಂದ ಇಂದು ಪ್ರಕಟಿಸಿರುವಂತ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ-2022ರಲ್ಲಿ ಪ್ರಮುಖವಾಗಿ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಎಂಬ ಮಿತಿಯನ್ನು ತೆಗೆದು ಹಾಕಲಾಗಿದೆ. ಇದಲ್ಲದೇ ಮಲೆನಾಡು, ಕಲ್ಯಾಣ ಕರ್ನಾಟಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರಗಳಿಗೆ ವರ್ಗಾವಣೆಯಾಗುವ ಶಿಕ್ಷಕರಿಗೆ ವರ್ಗಾವಣೆ ಮಿತಿಯನ್ನು ಸಡಿಸಲಾಗಿದೆ.
ಇದಷ್ಟೇ ಅಲ್ಲದೇ ಶೇ.25ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕ್ಷೇತ್ರಗಳ ಒಳಗೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಹೊಂದಾಣಿಕೆ ಸಂದರ್ಭದಲ್ಲಿ ಶಿಕ್ಷಕರು ಹಿಂದಿನ ಶಾಲೆಗಳಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಲಾಗುತ್ತಿದೆ.
BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್: ‘ಪುಣ್ಯಕೋಟಿ ದತ್ತು ಯೋಜನೆ’ ಅನುಷ್ಠಾನಕ್ಕೆ ‘ವೇತನ ಕಟ್’
ಪತಿ-ಪತ್ನಿ ಪ್ರಕರಣದಲ್ಲಿ ಶೈಕ್ಷಣಿಕ ತಾಲೂಕಿನಲ್ಲಿ ಹುದ್ದೆ ಖಾಲಿ ಇಲ್ಲದೇ ಇದ್ದರೇ, ಆ ಜಿಲ್ಲೆಯ ಬೇರೆ ತಾಲೂಕಿನಲ್ಲೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶೇ.25ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ಕ್ಷೇತ್ರಗಳಲ್ಲಿ ಒಂದೇ ವೃಂದದಲ್ಲಿ ಹತ್ತು ವರ್ಷ ನಿರಂತರ ಸೇವೆ ಮತ್ತು ಎಲ್ಲಾ ವೃಂದಗಳಲ್ಲಿ 15 ವರ್ಷ ನಿರಂತರ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಕ್ಷೇತ್ರದಿಂದ ಹೊರಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ