ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ನಿಯಮಗಳನ್ನ ಬದಲಾಯಿಸುತ್ತಿದೆ. ಬ್ಯಾಂಕ್ ಈಗ ಎಸ್ಬಿಐ ಎಟಿಎಂಗಳಿಂದ ನಗದು ಹಿಂಪಡೆಯುವ ನಿಯಮಗಳನ್ನ ಬದಲಾಯಿಸಿದೆ. ಹೌದು, ಈಗ ನೀವು ಎಸ್ಬಿಐ ಎಟಿಎಂನಿಂದ ನಗದು ಹಿಂಪಡೆಯಲು ವಿಶಿಷ್ಟ ಸಂಖ್ಯೆಯನ್ನ ನೀಡಬೇಕು. ನೀವು ಈ ಸಂಖ್ಯೆಯನ್ನ ನಮೂದಿಸದಿದ್ದರೆ ನಿಮ್ಮ ಹಣವನ್ನ ಫ್ರೀಜ್ ಮಾಡಲಾಗುತ್ತದೆ. ಅಂದ್ಹಾಗೆ, ಎಟಿಎಂ ವಹಿವಾಟುಗಳನ್ನ ಹೆಚ್ಚು ಸುರಕ್ಷಿತವಾಗಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು ಒಟಿಪಿ ಇಲ್ಲದೇ ನಗದು ಹಿಂಪಡೆಯುವಂತಿಲ್ಲ. ಇದರಲ್ಲಿ, ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಒಟಿಪಿಯನ್ನ ಸ್ವೀಕರಿಸುತ್ತಾರೆ. ಅದನ್ನ ನಮೂದಿಸದ ನಂತ್ರವೇ ಎಟಿಎಂನಿಂದ ಹಣ ಪಡೆಯಬೋದಾಗಿದೆ.
ಈ ನಿಬಂಧನೆಯ ಬಗ್ಗೆ ಬ್ಯಾಂಕ್ ಈಗಾಗಲೇ ಮಾಹಿತಿ ನೀಡಿದೆ. ಎಟಿಎಂಗಳಲ್ಲಿಯೂ ನಡೆಯುತ್ತಿರುವ ವಂಚನೆಗಳನ್ನ ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಹೆಚ್ಚಿನ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ.?
ವಂಚನೆಯಿಂದ ಗ್ರಾಹಕರನ್ನ ರಕ್ಷಿಸಲು ರೂ. 10,000 ಕ್ಕಿಂತ ಹೆಚ್ಚಿನ ಹಣವನ್ನ ಹಿಂಪಡೆಯಲು ಬ್ಯಾಂಕ್ ಹೊಸ ನಿಯಮವನ್ನ ಜಾರಿಗೆ ತರುತ್ತಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ, ತಮ್ಮ ಡೆಬಿಟ್ ಕಾರ್ಡ್ ಪಿನ್ನಿಂದ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಮೂಲಕ ಪ್ರತಿ ಬಾರಿ ತಮ್ಮ ATM ನಿಂದ ರೂ. 10,000 ಮತ್ತು ಹೆಚ್ಚಿನದನ್ನ SBI ಅನುಮತಿಸಿದೆ. ನೀವು ಎಟಿಎಂನಿಂದ ಹಣ ತೆಗೆಯುತ್ತಿದ್ದರೆ, ನಿಮ್ಮ ಮೊಬೈಲ್ಗೆ OTP ಕಳುಹಿಸಲಾಗುತ್ತದೆ. ನಂತರ ಆ ನಾಲ್ಕು ಅಂಕಿಯ OTP ನಮೂದಿಸಿದ ನಂತರ ನೀವು ATM ನಿಂದ ಹಣವನ್ನ ಹಿಂಪಡೆಯಬಹುದು.
ಬ್ಯಾಂಕ್ ಏಕೆ ಈ ಕ್ರಮ ಕೈಗೊಂಡಿತು?
OTP ಆಧಾರಿತ ನಗದು ಹಿಂಪಡೆಯುವಿಕೆ ಏಕೆ ಅಗತ್ಯ.? ಎಂಬ ಪ್ರಶ್ನೆಗೆ ಎಸ್ಬಿಐ ಉತ್ತರ ನೀಡುತ್ತಿದೆ. ಗ್ರಾಹಕರನ್ನ ವಂಚನೆಯಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಹೇಳಿದೆ. ವಾಸ್ತವವಾಗಿ, ಎಸ್ಬಿಐ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಇದು 71,705 ಔಟ್ಲೆಟ್ಗಳೊಂದಿಗೆ ಭಾರತದಲ್ಲಿ 22,224 ಶಾಖೆಗಳು, 63,906 ಎಟಿಎಂಗಳು ಮತ್ತು ಸಿಡಿಎಂಗಳ ದೊಡ್ಡ ಜಾಲವನ್ನ ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಕ್ರಮವಾಗಿ 9.1 ಕೋಟಿ ಮತ್ತು 2 ಕೋಟಿ ಆಗಿದೆ.
BREAKING NEWS: ತುಮಕೂರಿನಲ್ಲಿ ಅಕ್ರಮವಾಗಿ ಕೂಡಿಟ್ಟ ಬಿಹಾರ ಮೂಲದ 48 ಕಾರ್ಮಿಕರ ರಕ್ಷಣೆ
BREAKING NEWS: ಶ್ರೀರಂಗಪಟ್ಟಣದ ಮದರಸಾ ತೆರವುಗೊಳಿಸಿ, ದೇಗುಲವಾಗಿ ಸಂರಕ್ಷಿಸಲು ಹೈಕೋರ್ಟ್ ಗೆ ಪಿಐಎಲ್