ಬೆಂಗಳೂರು: ಮಂಡ್ಯ ಬಳಿಯ ಶ್ರೀರಂಗಪಟ್ಟಣದಲ್ಲಿನ ಜಾಮೀಯಾ ಮಸೀದಿ ವಿವಾದ ( Srirangapatna Jamia Masjid controversy ) ಮತ್ತೆ ಚಿಗುರೊಡೆದಿದೆ. ಜಾಮಿಯಾ ಮಸೀದಿ ಸರ್ವೆಗೆ ನಿರ್ದೇಶನ ನೀಡುವಂತೆ ಕೋರಿ, ಹೈಕೋರ್ಟ್ ಗೆ ( Karnataka High Court ) ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿದೆ. ಅಲ್ಲದೇ ಮದರಸಾ ತೆರವುಗೊಳಿಸಿ, ದೇಗುಲವಾಗಿ ಸಂರಕ್ಷಿಸಲು ಪಿಐಎಲ್ ನಲ್ಲಿ ಮನವಿ ಮಾಡಲಾಗಿದೆ.
ಇಂದು ಭಜರಂಗ ಸೇನೆಯಿಂದ ಹೈಕೋರ್ಟ್ ಗೆ ಜಾಮಿಯಾ ಮಸೀದಿ ಸರ್ವೆಗೆ ನಿರ್ದೇಶನ ಕೋರಿ ಪಿಐಎಲ್ ಸಲ್ಲಿಸಲಾಗಿದೆ. ಈ ಅರ್ಜಿಯಲ್ಲಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿವಾದಿತ ಸ್ಥಳದಲ್ಲಿ ಮೂಡಲ ಬಾಗಿಲು ಆಂಜನೇಯ ದೇಗುಲವಿತ್ತು. ಟಿಪ್ಪು ಅವಧಿಯಲ್ಲಿ ಆಂಜನೇಯ ದೇಗುಲ ಮಸೀದಿಯಾಗಿಸಲಾಗಿದೆ ಎಂದು ಹೇಳಿದೆ.
ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ
ಇನ್ನೂ ಜಾಮಿಯಾ ಮಸೀದಿಯಲ್ಲಿ ಗರುಡ ಕಂಭ, ಸ್ತೂಪ, ಹಿಂದೂ ದೇವರ ಚಿತ್ರಗಳಿವೆ. ಇವುಗಳನ್ನು ಸಂರಕ್ಷಿಸಲು ನಿರ್ದೇಶ ನೀಡಬೇಕು. ಮದರಸಾ ತೆರವುಗೊಳಿಸಿ, ದೇಗುಲವಾಗಿ ಸಂರಕ್ಷಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಹೈಕೋರ್ಟ್ ಯಾವ ನಿರ್ಧಾರವನ್ನು ಪ್ರಕಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’