ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮಗುವನ್ನು ಸಾಕುವುದು ಬಹಳ ಕಷ್ಟವಾಗಿದೆ. ಮಗು ಬೆಳೆಯುತ್ತಾ ಹೋದಂತೆ, ಆ ಮಗುವಿನ ಮೇಲೆ ಪೋಷಕರು ಬೀರುವ ಪ್ರಭಾವವನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಹೆತ್ತವರು ಮಕ್ಕಳೊಂದಿಗೆ ಸ್ನೇಹಿತರಂತೆಯೇ ಇರಲಿ ಅಥವಾ ಅಷ್ಟೇನು ಹತ್ತಿರದವರಾಗದಂತೆ ಇದ್ದರೂ, ಮಕ್ಕಳು ಬೆಳೆಯುತ್ತಾ ಹೋದಂತೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿರುತ್ತದೆ.
ಪೋಷಕರ ಕೆಲ ನಡವಳಿಕೆಗಳು ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದರೆ ಅದು ಮಕ್ಕಳಿಗೆ ಅರಿವಿರುವುದಿಲ್ಲ. ಬದಲಾಗಿ ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಅದಕ್ಕಾಗಿ ಕೆಲವರು ಮಕ್ಕಳ ಬಗ್ಗೆ ಮಾತನಾಡುವಾಗ, ʼಅಪ್ಪನ ಗುಣ.. ಅಮ್ಮನ ಗುಣ..ʼ ಅಂತ ಹೇಳೋದು.
ಪೋಷಕರು ಯಾವುದೋ ಉದ್ದೇಶಗಳಿಗಾಗಿ ಮಕ್ಕಳಿಗೆ ಸುಳ್ಳು ಹೇಳಬಹುದು. ಅದು ಪೋಷಕರಿಗೆ ಸರಿ ಎನಿಸಬಹುದು. ಆದರೆ ಮಕ್ಕಳಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೋವೈದ್ಯ ಡಾ. ಕ್ಯಾರೋಲ್ ಲೈಬರ್ಮ್ಯಾನ್ ಪ್ರಕಾರ, ಮಕ್ಕಳಿಗೆ ಪೋಷಕರು ಸುಳ್ಳು ಹೇಳಿದರೆ, ತಮ್ಮ ಮೇಲೆ ಮಕ್ಕಳು ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.
ಮುಂದೆ ಮಕ್ಕಳು ಯಾವುದೇ ರೀತಿಯಲ್ಲೂ ಪೋಷಕರನ್ನು ನಂಬದ ಸ್ಥಿತಿಗೆ ತರಬಹುದು. ಅಲ್ಲದೇ ಪೋಷಕರು ತಮ್ಮ ಮಕ್ಕಳ ಮುಂದೆ ಯಾರಿಗಾದರೂ ಸುಳ್ಳನ್ನು ಹೇಳುವುದನ್ನು ನೋಡಿದರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸುಳ್ಳು ಹೇಳುವುದು ಸರಿ ಎಂದು ನಂಬಲು ಪ್ರಾರಂಭಿಸುತ್ತಾರೆ. ಅದು ನಂತರ ದೊಡ್ಡ ಸಮಸ್ಯೆಯಾಗಿ ಬದಲಾಗಬಹುದು.