ತುಮಕೂರು: ಅಕ್ರಮವಾಗಿ ಬಿಹಾರ ಮೂಲಕ 48 ಕಾರ್ಮಿಕರನ್ನು ಕೂಡಿಟ್ಟು, ದುಡಿಸಿಕೊಳ್ಳುತ್ತಿದ್ದವರನ್ನು, ಇಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿನ ಪಶು ಆಹಾರ ಘಟಕದ ಕಾಂಪೌಂಡ್ ಒಳಗೆ ಶೆಡ್ ನಿರ್ಮಾಣ ಮಾಡಿ, ಅದರಲ್ಲಿ ಬಿಹಾರ ಮೂಲದ 48 ಕಾರ್ಮಿಕರನ್ನು ಕೂಡಿ ಇಡಲಾಗಿತ್ತು. ಇದಷ್ಟೇ ಅಲ್ಲದೇ ಯಾವುದೇ ಭದ್ರತೆಯನ್ನು ನೀಡದೇ, 350 ರೂ ಗಳಿಗೆ ಹಗಲಿರುಳು ತುಮುಲ್ ನಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’
ರಂಗನಾಥ್ ಎಂಟರ್ ಪ್ರೈಸರ್ ಏಜೆನ್ಸಿಯಿಂದ ಬಂದಿದ್ದಂತ ಈ ಕಾರ್ಮಿಕರನ್ನು, ಕೂಡಿ ಹಾಕಿ ದುಡಿಸಿಕೊಳ್ಳುತ್ತಿರುವಂತ ವಿಷಯ ತಿಳಿದಂತ ಗುಬ್ಬಿಯ ವೃತ್ತ ಕಾರ್ಮಿಕ ನಿರೀಕ್ಷಕಿ ಸುಶೀಲಾ ನೇತೃತ್ವದಲ್ಲಿ ಇಂದು ದಾಳಿ ನಡೆಸಲಾಗಿತ್ತು. ಈ ಮೂಲಕ ಬಿಹಾರ ಮೂಲದ 48 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.