ತುಮಕೂರು: ಗುಬ್ಬಿ ಪಟ್ಟಣದ ಪಶು ಆಹಾರ ಘಟಕದ ಮೇಲೆ ಇಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಿಹಾರ ಮೂಲದ 48 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಬಿಹಾರ ಮೂಲದ 48 ಕಾರ್ಮಿಕರನ್ನು ಅಕ್ರಮವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಪಶು ಆಹಾರ ಘಟಕದ ಮೇಲೆ ಕಾರ್ಮಿಕ ಇಲಾಖೆಯ ಗುಬ್ಬಿ ವಲಯ ವೃತ್ತ ನಿರೀಕ್ಷಕಿ ಸುಶೀಲ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಮಿಕರು ರಂಗನಾಥ್ ಎಂಟರ್ ಪ್ರೈಸಸ್ ಎಂಬ ಏಜನ್ಸಿ ಕಡೆಯಿಂದ ಪಶು ಆಹಾರ ಘಟಕಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದ್ದು,ಇವರಿಗಾಗಿ ಪಶು ಆಹಾರ ಘಟಕದ ಕಾಂಪೌಂಡ್ ಒಳಭಾಗದಲ್ಲಿ ಶೆಡ್ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಕಾರ್ಮಿಕರನ್ನು ಇರಿಸಲಾಗಿತ್ತು, ಅಲ್ಲದೇ ಯಾವುದೇ ಇಎಸ್ಇ, ಪಿಎಫ್ ಭದ್ರತೆ ನೀಡದೇ ಹಗಲು ರಾತ್ರಿ ಕೇವಲ. 350 ರೂ. ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
108 ಆಂಬುಲೆನ್ಸ್ ನೌಕರರ ಧರಣಿ ವಿಚಾರ: ಸಿಬ್ಬಂದಿಗೆ ವೇತನ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು – ಸಚಿವ ಸುಧಾಕರ್