ಕೆಎನ್ ಎನ್ ನ್ಯೂಸ್ ಡೆಸ್ಕ್ : ಉಪ್ಪು ಇಲ್ಲದೆ ಯಾವ ಅಡುಗೆಯೂ ರುಚಿ ಇರುವುದಿಲ್ಲ. ಆದರೆ ಉಪ್ಪು ಕೇವಲ ಅಡುಗೆಗೆ ಮಾತ್ರವಲ್ಲದೆ ವಾಸ್ತು ದೋಷದ ನಿವಾರಣೆಗೆ ಕೂಡಾ ಸಹಾಯ ಮಾಡುತ್ತದೆ. ವಾಸ್ತುಶಾಸ್ತ್ರದಲ್ಲಿ ಉಪ್ಪಿಗೆ ಬಹಳ ಪ್ರಾಮುಖ್ಯತೆ ಇದೆ.
BIG ALEART: ನಿಮ್ಮ ಮೂತ್ರದ ಬಣ್ಣ ಬದಲಾಗಿದೆಯೇ? ಹಾಗಾದ್ರೇ ಮೂತ್ರಕೋಶದ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ..!
ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿರುವರಿಗೆ ಬಿಪಿಯನ್ನು ನಿಯಂತ್ರಣದಲ್ಲಿಡಲು ಉಪ್ಪು ಸಹಾಯ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ. ಮಿತವಾಗಿ ಸೇವಿಸಿದರೆ ದೇಹಕ್ಕೆ ಅನುಕೂಲವಾಗುತ್ತದೆ. ಅಡುಗೆಯಲ್ಲಿ ಮಾತ್ರವಲ್ಲದೆ ವಾಸ್ತುಶಾಸ್ತ್ರದಲ್ಲಿಯೂ ಉಪ್ಪು ಬಹಳ ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸಲು, ದುಷ್ಟ ಶಕ್ತಿಗಳು ಮತ್ತು ಅಡೆತಡೆಗಳನ್ನು ತೆಗೆದುಹಾಕಲು ಉಪ್ಪು ಸಹಾಯ ಮಾಡುತ್ತದೆ. ವಾಸ್ತುಶಾಸ್ತ್ರದಲ್ಲಿ ಉಪ್ಪಿನ ಉಪಯೋಗ ಏನೆಂದು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಬಹಳ ಅಗತ್ಯ.
BIG ALEART: ನಿಮ್ಮ ಮೂತ್ರದ ಬಣ್ಣ ಬದಲಾಗಿದೆಯೇ? ಹಾಗಾದ್ರೇ ಮೂತ್ರಕೋಶದ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ..!
ಒಂದು ಲೋಟದಲ್ಲಿ ಉಪ್ಪನ್ನು ತುಂಬಿಸಿ ಅದನ್ನು ಸ್ನಾನಗೃಹದ ಮೂಲೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತದೆ. ಇದು ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ನಕಾರಾತ್ಮಕ ಶಕ್ತಿ ಕೂಡಾ ದೂರವಾಗುತ್ತದೆ.
ಮನೆಯಲ್ಲಿ ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ, ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಉಪ್ಪಿನಿಂದ ಸಮಸ್ಯೆ ಕಡಿಮೆಯಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಉಪ್ಪನ್ನು ತುಂಬಿ ಮಲಗುವ ಕೋಣೆಯಲ್ಲಿ ಇಟ್ಟರೆ ಅವರ ಆರೋಗ್ಯ ಸುಧಾರಿಸುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ.