ಮಂಗಳೂರು: ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಐದು ದಿನಗಳ ಕಾಲ ಅದ್ಧೂರಿಯಾಗಿ ಲಕ್ಷದೀಪೋತ್ಸವ ನಡೆಯಲಿದೆ.
HEALTH TIPS: ತಂದೆ-ತಾಯಿಗೆ ಡಯಾಬಿಟಿಸ್ ಇದ್ರೆ ಮಕ್ಕಳಿಗೂ ಬರುತ್ತಾ…? ವೈದ್ಯರು ಹೇಳೋದೇನು ಗೊತ್ತಾ?
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ತಿಕಮಾಸದ ಲಕ್ಷದೀಪೋತ್ಸವ ಮತ್ತು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ಇದೇ ನವೆಂಬರ್19ರಿಂದ 23ರ ತನಕ ನಡೆಯಲಿದೆ.
HEALTH TIPS: ತಂದೆ-ತಾಯಿಗೆ ಡಯಾಬಿಟಿಸ್ ಇದ್ರೆ ಮಕ್ಕಳಿಗೂ ಬರುತ್ತಾ…? ವೈದ್ಯರು ಹೇಳೋದೇನು ಗೊತ್ತಾ?
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪಂಚ ಉತ್ಸವಗಳ ವಿವರ
ನ.19ರಂದು ಹೊಸಕಟ್ಟೆ ಉತ್ಸವ
ನ.20 ಕೆರೆಕಟ್ಟೆ ಉತ್ಸವ
ನ.21 ಲಲಿತೋದ್ಯಾನ ಉತ್ಸವ
ನ.22 ಕಂಚಿಮಾರುಕಟ್ಟೆ ಉತ್ಸವ
ನ.23 ಗೌರಿ ಮಾರುಕಟ್ಟೆ ಉತ್ಸವ
ನವೆಂಬರ್ 19ರಂದು ಶಾಸಕ ಹರೀಶ್ ಪೂಂಜ ಅವರು ವಸ್ತುಪ್ರದರ್ಶನಕ್ಕೆ ಚಾಲನೆ ನೀಡುತ್ತಾರೆ. ಚಾಲನೆ ಬಳಿಕ ವಸ್ತುಪ್ರದರ್ಶನ ಮಂಟಪ ಮತ್ತು ಅಮೃತವರ್ಷಿಣಿ ಸಭಾಭವನದಲ್ಲಿ ನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ.