ತುಮಕೂರು: 108 ಆಂಬುಲೆನ್ಸ್ ಸಿಬ್ಬಂದಿಯ ವೇತನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ನಾಳೆ ಪ್ರತಿಭಟನೆ ನಡೆಸಲು 108 ಆಂಬುಲೆನ್ಸ್ ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ. ಈ ಕುರಿತು ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ; ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ
ಸದ್ಯಕ್ಕೆ 108 ಆಂಬುಲೆನ್ಸ್ ಸಿಬ್ಬಂದಿಯ ಮನವೊಲಿಸಲು ಯತ್ನಿಸುತ್ತೇವೆ. ಡಿಸೆಂಬರ್ ಒಳಗೆ ಹೊಸ ಸೇವೆಯನ್ನು ಒದಗಿಸುತ್ತೇವೆ.ಬಾಕಿ ಇರುವ ವೇತನವನ್ನು ಸರ್ಕಾರ ಪಾವತಿಸುತ್ತದೆ.ಜಿವಿಕೆ ಸಂಸ್ಥೆಯಿಂದ ಸರ್ಕಾರಕ್ಕೆ ಸಾಕಷ್ಟು ತೊಂದರೆಯಾಗಿದೆ ಎಂದರು. ಕಾನೂನು ಅಡ್ಡ ಇಟ್ಟುಕೊಂಡು ತೊಂದರೆ ಮಾಡಿದ್ದಾರೆ
ಅವರು ಹೆಸರು ಬದಲಾಯಿಸಿಕೊಂಡು ಬಂದರೂ ಅವಕಾಶ ನೀಡೋದಿಲ್ಲ.ಹೊಸ ಟೆಂಡರ್ನಲ್ಲಿ ಜಿವಿಕೆ ಸಂಸ್ಥೆಗೆ ಅವಕಾಶ ಕೊಡಲ್ಲ ಎಂದಿದ್ದಾರೆ.
BIGG NEWS: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ; ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ
ಇನ್ನು ತುಮಕೂರಲ್ಲಿ ಗರ್ಭಿಣಿ ಹಾಗೂ ನವಜಾತ ಶಿಶುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಕೆ ಸುಧಾಕರ್ ಪ್ರತಿಕ್ರಿಯೆ,ಗರ್ಭಿಣಿ, ಇಬ್ಬರು ಮಕ್ಕಳ ಸಾವಿನ ತನಿಖೆ ಏಕಮುಖವಾಗಿ ನಡೆದಿಲ್ಲ. ನಾನು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇನೆ. ಅವರು ಓಟಿಯಿಂದ ಬಂದಿರಬಹುದು ಆದರೆ ದೃಶ್ಯದಲ್ಲಿ ಗರ್ಭಿಣಿ ಹಾಗೂ ಡಾಕ್ಟರ್ ಉಷಾ ಇಬ್ಬರೂ ಇದ್ದಾರೆ ಎಂದರು.