ಗುಜರಾತ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವೆಂಬರ್ 11 ರಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರನ್ನು ಅಪಹರಿಸಲಾಗಿದೆ ಎಂದು ಹೇಳಿದ್ದಾರೆ.
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಆಪ್ ಅಭ್ಯರ್ಥಿ ಕಾಂಚನ್ ಜರಿವಾಲ್ ತಮ್ಮ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತು. ಆದರೂ ಅವರು ನಾಮಪತ್ರವನ್ನು ಸ್ವೀಕರಿಸಿದ್ದರು. ನಂತರ, ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಇದೀಗ ಅವರು ನಾಪತ್ತೆಯಾಗಿದ್ದಾರೆ. ಜರಿವಾಲ್ ಅವರನ್ನು ಕಿಡ್ನಾಪ್ ಮಾಡಲಾಗಿದೆಯೇ ಎಂದು ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.
“ನಮ್ಮ ಸೂರತ್ (ಪೂರ್ವ), ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ಕಾಣೆಯಾಗಿದೆ. ಮೊದಲಿಗೆ ಅವರ ನಾಮಪತ್ರ ತಿರಸ್ಕಾರಕ್ಕೆ ಬಿಜೆಪಿ ಯತ್ನಿಸಿತ್ತು. ಆದರೆ, ಅವರ ನಾಮಪತ್ರ ಅಂಗೀಕಾರವಾಯಿತು. ನಂತರ ಅವರ ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಲಾಗಿತ್ತು. ಇದೀಗ ಅವರು ಕಾಣೆಯಾಗಿದ್ದಾರೆ. ಅವರನ್ನು ಅಪಹರಿಸಲಾಗಿದೆಯೇ?” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Our candidate from Surat (East), Kanchan Jariwala, and his family missing since yesterday. First, BJP tried to get his nomination rejected. But his nomination was accepted. Later, he was being pressurised to withdraw his nomination.
Has he been kidnapped?
— Arvind Kejriwal (@ArvindKejriwal) November 16, 2022
ಇಂದು ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ, ಎಎಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಜರಿವಾಲಾ ಅವರನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಬಿಜೆಪಿಯನ್ನು ನೇರವಾಗಿ ಆರೋಪಿಸಿದರು.
Murder of democracy!
Our candidate Kanchan Jariwala from Surat East seat has been kidnapped by BJP.
First BJP unsuccessfully tried to get his nomination papers rejected, then coerced him to withdraw his candidature and now kidnapped him. He is missing since last afternoon. pic.twitter.com/SWpOEjSG59
— Raghav Chadha (@raghav_chadha) November 16, 2022
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ