ಬೆಂಗಳೂರು : ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಗ್ರಾಹಕರಿಗೆ ಕಠಿಣ ಎಚ್ಚರಿಕೆಯೊಂದನ್ನು ನೀಡಿದೆ. ಸರಿಯಾಗಿ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ಸೂಚನೆ ಕೊಟ್ಟಿದೆ.
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಬೆಸ್ಕಾಂ ಎಂಡಿ ಟ್ವಿಟರ್ ಖಾತೆಯ ಮೂಲಕ ಈ ಕುರಿತು ಮಾಹಿತಿ ನೀಡಲಾಗಿದೆ. ‘ಬೆಸ್ಕಾಂ ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದಲ್ಲಿ, ವಿದ್ಯುತ್ ಸಂಪರ್ಕ ಒಪ್ಪಂದವನ್ನು ರದ್ದುಗೊಳಿಸಲು ಬೆಸ್ಕಾಂ ಕ್ರಮ ಕೈಗೊಳ್ಳುತ್ತದೆ’ ಎಂದು ಎಚ್ಚರಿಕೆ ಕೊಡಲಾಗಿದೆ.
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಆನ್ಲೈನ್ ಮೂಲಕ ಪಾವತಿ ಮಾಡಿ
ಆನ್ಲೈನ್, ಆಫ್ಲೈನ್ ಮೂಲಕ ಬೆಸ್ಕಾಂ ಬಿಲ್ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಆನ್ಲೈನ್ ಬಿಲ್ ಪಾವತಿಯಲ್ಲಿ ಕೆಲವು ಅಡಚಣೆ ಉಂಟಾಗಿತ್ತು.ಈಗ ಅದನ್ನು ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಮಾಹಿತಿ ಕೊಟ್ಟಿದೆ. ‘ಗ್ರಾಹಕರೇ, ನಿಮ್ಮ ವಿದ್ಯುತ್ ಬಿಲ್ ಅನ್ನು ಯಾವುದೇ ಅಡೆತಡೆಯಿಲ್ಲದೆ ಪಾವತಿಸಿ. ನವೆಂಬರ್ 1 ರಂದು ಬೆಸ್ಕಾಂ ಆನ್’ಲೈನ್ ಪಾವತಿಗಳಲ್ಲಿ ಉಂಟಾದ ಅಡಚಣೆಯನ್ನು ಪರಿಹರಿಸಲಾಗಿದೆ’ ಎಂದು ಹೇಳಿದೆ.
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಬೆಸ್ಕಾಂ ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದಲ್ಲಿ, ವಿದ್ಯುತ್ ಸಂಪರ್ಕ ಒಪ್ಪಂದವನ್ನು ರದ್ದುಗೊಳಿಸಲು ಬೆಸ್ಕಾಂ ಕ್ರಮ ಕೈಗೊಳ್ಳುತ್ತದೆ. ಒಪ್ಪಂದ ರದ್ದತಿಯ ನಂತರ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ. pic.twitter.com/1KndWfqwsr
— Managing Director, BESCOM (@mdbescom) November 11, 2022
‘ಇದೀಗ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನು ಮುಕ್ತವಾಗಿ ಬೆಸ್ಕಾಂ ವೆಬ್ಸೈಟ್ ಅಥವಾ ಬೆಸ್ಕಾಂ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ಸುಲಭವಾಗಿ ಪಾವತಿಸಬಹುದಾಗಿದೆ’ ಎಂದು ಬೆಸ್ಕಾಂ ಟ್ವೀಟ್ ಮೂಲಕ ತಿಳಿಸಿದೆ. ನವೆಂಬರ್ ಮೊದಲ ವಾರದಲ್ಲಿ ಆನ್ಲೈನ್ ಮೂಲಕ ಬಿಲ್ ಪಾವತಿಸಲು ನೋಡಿದರೆ ಹೆಚ್ಚಿನ ಬಿಲ್ ತೋರಿಸುತ್ತಿತ್ತು. ಆದರೆ ಆಫ್ಲೈನ್ ಮೂಲಕ ಪಾವತಿ ಮಾಡುವಾಗ ಕಡಿಮೆ ಇರುತ್ತಿತ್ತು. ಆದ್ದರಿಂದ ಕೆಲವು ದಿನ ಆಫ್ಲೈನ್ ಮೂಲಕ ಪಾವತಿ ಮಾಡಿ ಎಂದು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿತ್ತು. ಈಗ ಆನ್ಲೈನ್ನಲ್ಲಿ ಇದ್ದ ಅಡೆತಡೆ ನಿವಾರಣೆ ಮಾಡಲಾಗಿದೆ. ವಿದ್ಯುತ್ ಬಳಕೆ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು, ಬಿಲ್ ವ್ಯವಸ್ಥೆಯಲ್ಲಿ ಆಗುವ ಲೋಪ ತಡೆಯಲು ಬೆಸ್ಕಾಂ ಹಳೆಯ ಮೆಕ್ಯಾನಿಕಲ್ ವಿದ್ಯುತ್ ಮೀಟರ್ ಬದಲಾಗಿ, ನವೀನ ಮಾದರಿಯ ಡಿಜಿಟಲ್ ವಿದ್ಯುತ್ ಮೀಟರ್ ಅನ್ನು ಬೆಂಗಳೂರು ನಗರದಲ್ಲಿ ಅಳವಡಿಕೆ ಮಾಡುತ್ತಿದೆ. ಇದಕ್ಕೆ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ, ಡಿಜಿಟಲ್ ಮೀಟರ್ ಉಚಿತವಾಗಿ ಅಳವಡಿಸಲಾಗುತ್ತಿದೆ.
BIG NEWS: ದೇಶದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ಜಾರಿಗೆ ತರಲು ಬಿಜೆಪಿ ಬದ್ಧ: ಕೇಂದ್ರ ಗೃಹ ಸಚಿವ ಅಮಿತ್ ಶಾ