ಹ್ನಾಥಿಯಾಲ್ (ಮಿಜೋರಾಂ): ಮಿಜೋರಾಂನ ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್ ಗ್ರಾಮದಲ್ಲಿ ಕುಸಿದ ಕಲ್ಲು ಕ್ವಾರಿಯ ಅವಶೇಷಗಳಿಂದ ಮಂಗಳವಾರ ಮತ್ತೆ ಮೂರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಜಿಕ್ಪುಯಿ ತಿಳಿಸಿದ್ದಾರೆ.
ಇದುವರೆಗೆ 11 ಮೃತದೇಹಗಳು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಿಎಸ್ಎಫ್, ಅಸ್ಸಾಂ ರೈಫಲ್ಸ್, ಎನ್ಡಿಆರ್ಎಫ್, ರಾಜ್ಯ ಪೊಲೀಸ್ ಮತ್ತು ಜಿಲ್ಲಾಡಳಿತದ ತಂಡಗಳು ಉಳಿದ ವ್ಯಕ್ತಿಯ ಶವವನ್ನು ಹೊರತೆಗೆಯಲು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಮವಾರ ಸಂಜೆ ಮಿಜೋರಾಂನಲ್ಲಿ ಕಲ್ಲು ಕ್ವಾರಿಯೊಂದು ಕುಸಿದ ಪರಿಣಾಮ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಇದೀಗ ಸಿಕ್ಕಿಬಿದ್ದ ಎಂಟು ವಲಸೆ ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ, ಬಿಎಸ್ಎಫ್ ರಕ್ಷಣಾ ತಂಡವು ಕಾರ್ಯಾಚರಣೆ ಮುಂದುವರೆಸಿದೆ.
Job Alert : ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ