ಬೆಂಗಳೂರು: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ( Grant-in-aid educational institution ) ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿರುವಂತ ಶಿಕ್ಷಕ, ಸಿಬ್ಬಂದಿಗಳಿಗೆ ನಿವೃತ್ತಿಯ ನಂತ್ರದ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾವನ್ನು ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ( Education Department ) ಆದೇಶಿಸಿದೆ.
ಮನೆ ನಿರೀಕ್ಷೆಯಲ್ಲಿದ್ದ ಜನರಿಗೆ ಗುಡ್ ನ್ಯೂಸ್: ‘ಬೆಂಗಳೂರು ಅಮೃತೋತ್ಸವ ಮನೆ’ ಯೋಜನೆಗೆ ಅರ್ಜಿ ಆಹ್ವಾನ
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ( School Education Department ) ಹೊರಡಿಸಿರುವಂತ ಆದೇಶ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. 2020-21 ರಿಂದ 2021-22ನೇ ಸಾಲಿನವರೆಗೆ ನಿವೃತ್ತರಾದ ಅನುದಾನಿತ ಶಾಲಾ ಶಿಕ್ಷಕರುಗಳಿಗೆ ನಿವೃತ್ತಿಯ ನಂತ್ರದ ಗಳಿಕೆ ರಜೆ ನಗಧೀಕರಣ ಸೌಲಭ್ಯಕ್ಕೆ ಸಂಬಂಧ ರೂ.95.99 ಕೋಟಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದಿದ್ದಾರೆ.
ಈ ಪ್ರಸ್ತಾವನೆಯ ಪೈಕಿ 2021-22ನೇ ಸಾಲಿನಲ್ಲಿ ರೂ.7.02 ಕೋಟಿಗಳನ್ನು ಹಾಗೂ 2022-23ನೇ ಸಾಲಿನಲ್ಲಿ ರೂ.42.72 ಕೋಟಿಗಳ್ನು ಸರ್ಕಾರದಿಂದ ಪ್ರಥಮ ಕಂತಾಗಿ ಬಿಡುಗಡೆ ಮಾಡಲಾಗಿರುತ್ತದೆ. ಈ ಮೊತ್ತವನ್ನು ಪ್ರತಿ ಜಿಲ್ಲೆಯ ಒಟ್ಟಾರೆ ಬೇಡಿಕೆಯ ಶೇ.50ರಷ್ಟು ಮೊತ್ತವನ್ನು ಎಲ್ಲಾ ತಾಲೂಕುಗಳಿಗೆ ಕೆ2 ತಂತ್ರಾಂಶದಡಿ ಬಿಡುಗಡೆ ಮಾಡಿ ಆಯಾ ಡಿಡಿಓಗಳಿಗೆ ಹಂಚಿಕೆ ಮಾಡಲಾಗಿರುತ್ತದೆ ಎಂದು ತಿಳಿಸಿದೆ.
ಸಾರ್ವಜನಿಕರಿಗೆ ಸಿಹಿ ಸುದ್ದಿ ; ಖಾತೆಗೆ ಶೀಘ್ರ ಸಿಲಿಂಡರ್ ‘ಸಬ್ಸಿಡಿ’ ಜಮೆ, ಈಗ ₹587ಗೆ ‘LPG ಗ್ಯಾಸ್’ ಲಭ್ಯ
ಪ್ರಸ್ತುತ ಬಿಡುಗಡೆ ಮಾಡಲಾದ ಅನುದಾನವನ್ನು ಸೂಚಿಸಲಾದ ನಿಯಮ ಹಾಗೂ ಮಾರ್ಗಸೂಚಿಗಳಂತೆ ವೆಚ್ಚ ಭರಿಸುವುದು. ಯಾವುದೇ ಕಾರಣಕ್ಕೂ ಜೇಷ್ಠತೆಯನ್ನು ಹೊರತುಪಡಿಸಿ ವೆಚ್ಚ ನಿರ್ವಹಿಸುವಂತಿಲ್ಲ ಎಂದು ಹೇಳಿದ್ದಾರೆ.