ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಮುಂಬರುವಂತ ಶೈಕ್ಷಣಿಕ ವರ್ಷದಿಂದಲೇ 1ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ( School Admission ) 6 ವರ್ಷ ನಿಗದಿ ಪಡಿಸಿತ್ತು. ಈ ಬಳಿಕ ಆದೇಶವನ್ನು ರದ್ದುಗೊಳಿಸಿತ್ತು. ಇದೀಗ 2025-26ನೇ ಶೈಕ್ಷಣಿಕ ವರ್ಷದಿಂದ ಕಡ್ಡಾಯಗೊಳಿಸಿದೆ.
ಸಿದ್ದರಾಮಯ್ಯ ಮೊದಲು ಡಿ.ಕೆ.ಶಿವಕುಮಾರ್ ಬೆಂಬಲ ಪಡೆಯಲಿ – ಸಿಎಂ ಬಸವರಾಜ ಬೊಮ್ಮಾಯಿ
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ( Education Department ) ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವಂತ ತಿದ್ದುಪಡಿ ಆದೇಶ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದರಲ್ಲಿ ದಿನಾಂಕ 26-07-2022ರ ಆದೇಶದಲ್ಲಿ ಶೈಕ್ಷಣಿಕ ವರ್ಷದ ಜೂನ್ 1ನೇ ತರಗತಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ( 1st Standard School Admission ) ವಯೋಮಿತಿಯನ್ನು ನಿಗದಿ ಪಡಿಸಿ ಆದೇಶಿಸಿತ್ತು ಎಂದಿದ್ದಾರೆ.
BIGG NEWS: ಕಡೂರು ಕ್ಷೇತ್ರದ ಅಭಿವೃದ್ಧಿಗೆ 2,800 ಕೋಟಿ ಅನುದಾನ; ಸಿಎಂ ಬೊಮ್ಮಾಯಿ
ಇನ್ನೂ ಈ ಮೊದಲಿನ ಆದೇಶವನ್ನು 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿ ಪಡಿಸಿ ಆದೇಶಿಸಿದ ಎಂದು ತಿಳಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ