ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದಿಂದಲೇ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು. ಅಂತ್ಯಸಂಸ್ಕಾರಕ್ಕೆ ಇದೇ ಕಾಂಗ್ರೆಸ್ 3×6 ಅಡಿ ಕೊಟ್ಟಿದ್ದು. ಆ ಜಾಗವನ್ನು ಬಿಜೆಪಿ ಸ್ಮಾರಕವಾಗಿ ಪರಿವರ್ತಿಸಿದೆ. ಕಾಂಗ್ರೆಸ್ ನವರಿಗೆ ಕುಂಕುಮ, ವಿಭೂತಿ, ಕೇಸರಿ ಶಾಲು ಅಂದರೇ ಉರಿ ಬೀಳುತ್ತದೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ವಾಗ್ಧಾಳಿ ನಡೆಸಿದ್ದಾರೆ.
ಜನಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಪರ ಜನಶಕ್ತಿ ಸಾಬೀತು – ಸಿಎಂ ಬಸವರಾಜ ಬೊಮ್ಮಾಯಿ
ನಗರದಲ್ಲಿ ಇಂದು ನಡೆದಂತ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದಂತ ಅವರು, ಕೆಂಪೇಗೌಡ ಪ್ರತಿಮೆ ನಿರ್ಮಾಣದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಉರಿ ಬಿದ್ದಿದೆ. ಈಗ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದವರಿಗೆ ಕುಂಕುಮ, ವಿಭೂತಿ, ಕೇಸರಿ ಶಾಲು ಕಂಡರೇ ಉರಿಯಾಗುತ್ತಾರೆ. ಇಂಥವರನ್ನು ನಮ್ಮ ಊರಿಗೆ ಬಿಟ್ಟುಕೊಡಬೇಡಿ. ಚಿಕ್ಕಮಗಳೂರಿನ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ತರೀಕೆರೆಯಲ್ಲಿನ ಬಿಜೆಪಿ ಶಕ್ತಿ ಪ್ರದರ್ಶನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯಗೆ ಗೊತ್ತಾಗಿದೆ ಎಂದು ಹೇಳಿದರು.
BIGG NEWS: ಕಡೂರು ಕ್ಷೇತ್ರದ ಅಭಿವೃದ್ಧಿಗೆ 2,800 ಕೋಟಿ ಅನುದಾನ; ಸಿಎಂ ಬೊಮ್ಮಾಯಿ